ದಿನೇಶ್ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಅವರ ತಂದೆ ಸಾಲ ಮಾಡಿದ್ದರು. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೊಳಗಾದ ದಿನೇಶ್ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಯಿತು. ಸರ್ಕಾರದಿಂದ ಯಾವುದೇ ನೆರವು ಸಿಗದಿದ್ದಾಗ, ಮಾಡಿದ ಸಾಲವನ್ನು ತೀರಿಸಲು ದಿನೇಶ್ ಹರ್ಯಾಣದ ಭಿವಾನಿಯ ರಸ್ತೆಗಳಲ್ಲಿ ಗಾಡಿ ತಳ್ಳುತ್ತಾ ಕುಲ್ಫಿ ಮಾರಾಟ ಮಾಡುವ ಪರಿಸ್ಥಿತಿಗೆ ಸಿಲುಕಿದರು.

ನವದೆಹಲಿ(ಅ.30]: ಕ್ರೀಡಾಪಟುಗಳಿಗೆ ಎಂತೆಂತಾ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದಕ್ಕೆ ಹರ್ಯಾಣ ಮೂಲದ ರಾಷ್ಟ್ರೀಯ ಬಾಕ್ಸರ್ ದಿನೇಶ್ ಕುಮಾರ್'ರ ಕಥೆಯೇ ಉದಾಹರಣೆ. ದೇಶದ ಅತ್ಯುತ್ತಮ ಬಾಕ್ಸರ್ ಆಗಿ ಗುರುತಿಸಿಕೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಚಿನ್ನ, 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗೆದ್ದಿರುವ ದಿನೇಶ್, ಈಗ ಜೀವನಕ್ಕಾಗಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.

ಆರ್ಥಿಕ ಸಂಕಷ್ಟ: ದಿನೇಶ್ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಅವರ ತಂದೆ ಸಾಲ ಮಾಡಿದ್ದರು. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೊಳಗಾದ ದಿನೇಶ್ ಚಿಕಿತ್ಸೆಗೆ ಸಾಕಷ್ಟು
ಹಣ ಖರ್ಚಾಯಿತು. ಸರ್ಕಾರದಿಂದ ಯಾವುದೇ ನೆರವು ಸಿಗದಿದ್ದಾಗ, ಮಾಡಿದ ಸಾಲವನ್ನು ತೀರಿಸಲು ದಿನೇಶ್ ಹರ್ಯಾಣದ ಭಿವಾನಿಯ ರಸ್ತೆಗಳಲ್ಲಿ ಗಾಡಿ ತಳ್ಳುತ್ತಾ ಕುಲ್ಫಿ ಮಾರಾಟ
ಮಾಡುವ ಪರಿಸ್ಥಿತಿಗೆ ಸಿಲುಕಿದರು.

Scroll to load tweet…

ಎಷ್ಟೇ ಗೋಗರೆದರೂ ಈ ಹಿಂದಿನ ಹಾಗೂ ಹಾಲಿ ಸರ್ಕಾರದಿಂದ ಆರ್ಥಿಕ ನೆರವು ದೊರೆತಿಲ್ಲ. ದಿನದಿಂದ ದಿನಕ್ಕೆ ಸಾಲಗಾರರ ಒತ್ತಡ ಹೆಚ್ಚಾದ ಕಾರಣ, ತಳ್ಳುವ ಗಾಡಿಯಲ್ಲಿ ಕುಲ್ಫಿ ಮಾರಾಟ
ಮಾಡುವುದುನ್ನು ಬಿಟ್ಟು ಬೇರೆ ದಾರಿ ತೋಚಲಿಲ್ಲ’ ಎಂದು ದಿನೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ‘ನಾನೊಬ್ಬ ಉತ್ತಮ ಬಾಕ್ಸರ್. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದೇನೆ. ಆದರೆ ಯಾರೂ ಸಹ ನನ್ನ ಪ್ರತಿಭೆಯನ್ನು ಗುರುತಿಸುತ್ತಿಲ್ಲ. ಬಾಕ್ಸಿಂಗ್ ತರಬೇತಿ ನೀಡಲು ಸಹ ನಾನು ಸಿದ್ಧನಿದ್ದೇನೆ. ಆದರೆ ಅದಕ್ಕೂ ಅವಕಾಶಗಳು ಸಿಗುತ್ತಿಲ್ಲ. ಸಾಲ ತೀರಿಸಲು ಬೇರೆ ದಾರಿ ಸಿಗದಿದ್ದಾಗ ಕುಲ್ಫಿ ಮಾರಾಟಕ್ಕಿಳಿದಿದ್ದೇನೆ. ಕ್ರೀಡಾಪಟುವಿನ ನೋವು ಸರ್ಕಾರಗಳಿಗೆ ಅರ್ಥವಾಗುವುದೇ ಇಲ್ಲ’ ಎಂದು ದಿನೇಶ್ ಬೇಸರ ವ್ಯಕ್ತಪಡಿಸಿದ್ದಾರೆ.