ಭಾರತದ ಕಿರಿಯರ ತಂಡಕ್ಕೆ ಅರ್ಜುನ್ ಆಯ್ಕೆ , ರಾಜ್ಯದಿಂದ ಒರ್ವನಿಗೆ ಅವಕಾಶ

Arjun Tendulkar Selected For India Under-19 Squad For Sri Lanka Tour
Highlights

ಜುಲೈ ತಿಂಗಳಿನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ನಡೆಯಲಿದೆ. 18 ವರ್ಷದ ಅರ್ಜುನ್ ಅನೂಜ್ ರಾವತ್ ನಾಯಕತ್ವದ 15ರ ಬಳಗದ  ಅಂಡರ್ 19 ತಂಡದಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಕರ್ನಾಟಕದ ದೇವದತ್ ಪಡೀಕಲ್ ಕೂಡ ಆಯ್ಕೆಯಾಗಿದ್ದಾರೆ.

ಮುಂಬೈ(ಜೂ.07): ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಯ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜುಲೈ ತಿಂಗಳಿನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ನಡೆಯಲಿದೆ. 18 ವರ್ಷದ ಅರ್ಜುನ್ ಅನೂಜ್ ರಾವತ್ ನಾಯಕತ್ವದ 15ರ ಬಳಗದ  ಅಂಡರ್ 19 ತಂಡದಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಕರ್ನಾಟಕದ ದೇವದತ್ ಪಡೀಕಲ್ ಕೂಡ ಆಯ್ಕೆಯಾಗಿದ್ದಾರೆ.

ತಂಡದ ಸದಸ್ಯರು

4 ದಿನಗಳ ಟೆಸ್ಟ್ ಸರಣಿ

ಅನೂಜ್ ರಾವತ್[ನಾಯಕ, ವಿಕೇಟ್ ಕೀಪರ್], ಅಥರ್ವ ತಾಯ್ಡೆ, ದೇವದತ್ತಾ ಪಡೀಕಲ್, ಆರ್ಯನ್ ಜುಯಾಲ್[ವಿಕೇಟ್ ಕೀಪರ್], ಯಶ್ ರಾಥೋಡ್, ಆಯೂಶ್ ಬದೋನಿ,ಸಮೀರ್ ಚೌಧರಿ, ಸಿದ್ಧಾರ್ಥ ದೇಸಾಯಿ, ಹರ್ಷ ತ್ಯಾಗಿ, ವೈ.ಡಿ.ಮಾಗ್ವಾನಿ, ಅರ್ಜುನ್ ತೆಂಡೂಲ್ಕರ್, ನೇಹಾಲ್ ವಡೇರಾ, ಆಕಾಶ್ ಪಾಂಡೆ, ಮೋಹಿತ್ ಜಾಂಗ್ರಾ, ಪವನ್ ಶಾ

ಏಕದಿನ ಪಂದ್ಯ
ಆರ್ಯನ್ ಜಯೂಲ್ [ನಾಯಕ, ವಿಕೇಟ್ ಕೀಪರ್ ], ಅನೂಜ್ ರಾವತ್[ವಿಕೇಟ್ ಕೀಪರ್], ಅಥರ್ವ ತಾಯ್ಡೆ, ದೇವದತ್ತಾ ಪಡೀಕಲ್,  ಯಶ್ ರಾಥೋಡ್, ಆಯೂಶ್ ಬದೋನಿ,ಸಮೀರ್ ಚೌಧರಿ, ಸಿದ್ಧಾರ್ಥ ದೇಸಾಯಿ, ಹರ್ಷ ತ್ಯಾಗಿ, ವೈ.ಡಿ.ಮಾಗ್ವಾನಿ,  ನೇಹಾಲ್ ವಡೇರಾ, ಆಕಾಶ್ ಪಾಂಡೆ, ಮೋಹಿತ್ ಜಾಂಗ್ರಾ, ಪವನ್ ಶಾ, ವೈ.ಜೈಶ್ವಾಲ್  

loader