ಮುಂಬೈ(ಮಾ.16): ಜ್ಯೂನಿಯರ್ ಕ್ರಿಕೆಟ್‌ನಿಂದ ಸೀನಿಯರ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ರೆಡಿಯಾಗಿದ್ದಾರೆ. ಮುಂಬರವ ಟಿ20 ಮುಂಬೈ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಅರ್ಜುನ್ ತೆಂಡೂಲ್ಕರ್ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಜಿಂಕ್ಯ ರಹಾನೆ - ವಿರಾಟ್ ಕೊಹ್ಲಿ ಹೇಳಿಕೆಯಲ್ಲಿ ಗೊಂದಲ!

ಕಳೆದ ವರ್ಷ ಭಾರತ ಅಂಡರ್-19 ತಂಡ ಪ್ರತಿನಿಧಿಸಿದ ಅರ್ಜುನ್ ತೆಂಡೂಲ್ಕರ್, ಶ್ರೀಲಂಕಾ ವಿರುದ್ಧ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇತ್ತೀಚೆಗೆ ಡಿವೈ ಪಾಟೀಲ್ ಟೂರ್ನಿ ಹಾಗೂ ಮುಂಬೈ ಅಂಡರ್ 23 ತಂಡದಲ್ಲೂ ಆಡಿದ್ದಾರೆ. ಇದೀಗ ಮುಂಬೈ ಟಿ20 ಲೀಗ್ ಟೂರ್ನಿ ಆಡಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಸಚಿನ್ ತೆಂಡುಲ್ಕರ್ ಶತಕಗಳ ಶತಕಕ್ಕೆ 7ರ ಸಂಭ್ರಮ

ಎಡಗೈ ವೇಗಿಯನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ರೀತಿಯಲ್ಲೇ ನಡೆಯುತ್ತಿರುವ   ಮುಂಬೈ ಟಿ20 ಲೀಗ್ ಟೂರ್ನಿ ಆಸಕ್ತಿ ಕೆರಳಿಸಿದೆ.