17 ವರ್ಷದ ಅರ್ಜುನ್ ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಬ್ಯಾಟ್ಸ್'ಮನ್ ಜಾನಿ ಬ್ರಿಸ್ಟೋ ಅವರನ್ನು ಯಾರ್ಕರ್ ಹಾಕುವ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಸುದ್ದಿಯಾಗಿದ್ದರು.
ಮುಂಬೈ(ಸೆ.11): ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ತನ್ನ ತಂದೆಯ ಹಾದಿಯನ್ನೇ ಅನುಸರಿಸುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್, 19 ವರ್ಷದೊಳಗಿನವರ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 17 ವರ್ಷದ ಅರ್ಜುನ್ ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಬ್ಯಾಟ್ಸ್'ಮನ್ ಜಾನಿ ಬ್ರಿಸ್ಟೋ ಅವರನ್ನು ಯಾರ್ಕರ್ ಹಾಕುವ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಸುದ್ದಿಯಾಗಿದ್ದರು.
ಅಖಿಲ ಭಾರತ 19 ವರ್ಷದೊಳಗಿನ ಆಹ್ವಾನಿತ ಏಕದಿನ ಪಂದ್ಯಾವಳಿಗೆ ಮುಂಬೈ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಅರ್ಜುನ್'ಗೆ ಸ್ಥಾನ ನೀಡಲಾಗಿದೆ.
ಸೆ.16ರಿಂದ 23ರತನಕ ಬರೋಡದಲ್ಲಿ ಪಂದ್ಯಾವಳಿಯು ನಡೆಯಲಿದೆ.
