ಮುಂಬೈ[ಮೇ.05]: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ₹5 ಲಕ್ಷಕ್ಕೆ ಆಕಾಶ್ ಟೈಗರ್ಸ್‌ ಮುಂಬೈ ವೆಸ್ಟರ್ನ್ ಸಬರ್ಬ್ ತಂಡದ ಪಾಲಾಗಿದ್ದಾರೆ. 

ಮುಂಬೈ ಟಿ20 ಲೀಗ್‌ಗೆ ಶನಿವಾರ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು. ಆಲ್ರೌಂಡರ್‌ಗಳ ವಿಭಾಗದಲ್ಲಿದ್ದ ಅರ್ಜುನ್, ಮೂಲ ಬೆಲೆ ₹1 ಲಕ್ಷ ನಿಗದಿಯಾಗಿತ್ತು. ಹರಾಜಿನ ವೇಳೆ ನಾರ್ಥ್ ಮುಂಬೈ ಪ್ಯಾಂಥರ್ಸ್‌ ₹5 ಲಕ್ಷ ಬಿಡ್ ಕೂಗಿತು. ಆದರೆ, ಪಂದ್ಯಾವಳಿಯ ನಿಯಮದಂತೆ ಲೀಗ್‌ನಲ್ಲಿ ಹೊಸದಾಗಿ ಪಾಲ್ಗೊಳ್ಳುತ್ತಿರುವ ತಂಡ ಗಳಿಗೆ ಬೇರೊಂದು ತಂಡವು ಬಿಡ್ ಮಾಡಿರುವ ಆಟಗಾರರನ್ನು ಅಷ್ಟೇ ಮೊತ್ತ ನೀಡಿ ತಮ್ಮದಾಗಿಸಿಕೊಳ್ಳುವ ಅವಕಾಶವಿದೆ. 

ಹರಾಜಿಗೂ ಮುನ್ನ ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಅವರನ್ನು 6 ಪ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿವೆ. ಈ ಟೂರ್ನಿಗೆ ಸಚಿನ್ ತೆಂಡುಲ್ಕರ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.