ಎಡಗೈ ವೇಗಿಯಾಗಿರುವ ಅರ್ಜುನ್ 8.2 ಓವರ್’ಗಳಲ್ಲಿ ಒಂದು ಮೇಡನ್ ಸಹಿತ 30 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೊದಲು ಬಂಗಾಳ ವಿರುದ್ಧದ ಪಂದ್ಯದಲ್ಲೂ ಮೂರು ವಿಕೆಟ್ ಕಬಳಿಸಿ ಮುಂಬೈ ಗೆಲುವಿಗೆ ಕಾರಣರಾಗಿದ್ದರು.

ಅಹ್ಮದಾಬಾದ್[ಅ.07]: 19 ವರ್ಷದೊಳಗಿನವರ ವಿನು ಮಂಕಡ್ ಟೂರ್ನಿಯಲ್ಲಿ ಗುಜರಾತ್ ವಿರುದ್ಧ ಮಿಂಚಿನ ಪ್ರದರ್ಶನ ತೋರುವ ಮೂಲಕ ಅರ್ಜುನ್ ತೆಂಡುಲ್ಕರ್ ಮುಂಬೈ ತಂಡಕ್ಕೆ ಗೆಲುವಿನ ಸಿಹಿ ನೀಡಿದರು.

ಇಂದು ನಡೆದ ಪಂದ್ಯದಲ್ಲಿ ಗುಜರಾತ್’ನ ಪ್ರಮುಖ 5 ವಿಕೆಟ್ ಕಬಳಿಸುವ ಮೂಲಕ ಕೇವಲ 142 ರನ್’ಗಳಿಗೆ ನಿಯಂತ್ರಿಸಿದರು. ಸುಲಭ ಗುರಿ ಬೆನ್ನತ್ತಿದ ಮುಂಬೈ ತಂಡವು 9 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿತು.

ಎಡಗೈ ವೇಗಿಯಾಗಿರುವ ಅರ್ಜುನ್ 8.2 ಓವರ್’ಗಳಲ್ಲಿ ಒಂದು ಮೇಡನ್ ಸಹಿತ 30 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೊದಲು ಬಂಗಾಳ ವಿರುದ್ಧದ ಪಂದ್ಯದಲ್ಲೂ ಮೂರು ವಿಕೆಟ್ ಕಬಳಿಸಿ ಮುಂಬೈ ಗೆಲುವಿಗೆ ಕಾರಣರಾಗಿದ್ದರು.