ಶತಕ ಸಿಡಿಸಿ ಅನುಷ್ಕಾಗೆ ಹೂ ಮುತ್ತಿಟ್ಟ ವಿರಾಟ್ ಕೊಹ್ಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Aug 2018, 1:39 PM IST
Anushka Sharma Virat Kohli exchange flying kisses as he hits another century
Highlights

ವಿರಾಟ್ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಪೆವಿಲಿಯನ್’ನಲ್ಲಿದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತಮ್ಮ ಸೀಟ್’ನಿಂದ ಎದ್ದು ಪ್ಲೈಯಿಂಗ್ ಕಿಸ್ ರವಾನಿಸಿದರು. ಕೊಹ್ಲಿ ಕೂಡಾ ತಮ್ಮ ಬ್ಯಾಟ್’ಗೆ ಮುತ್ತಿಕ್ಕಿ ಆ ಮುತ್ತನ್ನು ಅನುಷ್ಕಾಗೆ ರವಾನಿಸಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಟ್ರೆಂಟ್’ಬ್ರಿಡ್ಜ್[ಆ.21]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ ಮೂರು ರನ್’ಗಳಿಂದ ಶತಕ ವಂಚಿತರಾಗಿದ್ದ ವಿರಾಟ್ ಎರಡನೇ ಇನ್ನಿಂಗ್ಸ್’ನಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ವಿರುಷ್ಕಾ ನಡುವೆ ಹೂಮುತ್ತು ಎಕ್ಸ್’ಚೇಂಜ್ ಕೂಡಾ ಆಯ್ತು.

ವಿರಾಟ್ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಪೆವಿಲಿಯನ್’ನಲ್ಲಿದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತಮ್ಮ ಸೀಟ್’ನಿಂದ ಎದ್ದು ಪ್ಲೈಯಿಂಗ್ ಕಿಸ್ ರವಾನಿಸಿದರು.

ಕೊಹ್ಲಿ ಕೂಡಾ ತಮ್ಮ ಬ್ಯಾಟ್’ಗೆ ಮುತ್ತಿಕ್ಕಿ ಆ ಮುತ್ತನ್ನು ಅನುಷ್ಕಾಗೆ ರವಾನಿಸಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ರೀತಿಯ ರೋಮ್ಯಾಂಟಿಕ್ ಸನ್ನಿವೇಷ ನೋಡುವುದು ವಿರುಷ್ಕಾ ಅಭಿಮಾನಿಗಳಿಗೆ ಹೊಸತೇನಲ್ಲ. ವಿರಾಟ್ ಅಬ್ಬರಿಸಿದಾಗಲೆಲ್ಲಾ ಅನುಷ್ಕಾ ಚಿಯರ್ಸ್ ಮಾಡುತ್ತಲೇ ಇರುತ್ತಾರೆ. 

ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗಾಗಲೇ 2-0 ಹಿನ್ನಡೆ ಅನುಭವಿಸಿದೆ. ಇದೀಗ ಮೂರನೇ ಟೆಸ್ಟ್’ನಲ್ಲಿ ಭಾರತ 520 ರನ್’ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿದೆ. ಇಂಗ್ಲೆಂಡ್ ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಆರಂಭಿಸಿತ್ತು, ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಸಿದ್ದು, ಗೆಲ್ಲಲು ಇನ್ನು 498 ರನ್’ಗಳ ಅವಶ್ಯಕತೆಯಿದೆ.

loader