ನಾಟಿಂಗ್’ಹ್ಯಾಮ್[ಆ.22]: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಕೊಹ್ಲಿ ಅಮೋಘ ಬ್ಯಾಟಿಂಗ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ತಮ್ಮ ಇನ್ನಿಂಗ್ಸ್ ಅನ್ನು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.

ಮೂರನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 3 ರನ್’ಗಳಿಂದ ಕೊಹ್ಲಿ ಶತಕ ವಂಚಿತರಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್’ನಲ್ಲಿ ಟೆಸ್ಟ್ ವೃತ್ತಿ ಜೀವನದ 23ನೇ ಶತಕ ಸಿಡಿಸಿದ ಬೆನ್ನಲ್ಲೇ ಕೊಹ್ಲಿ ತನ್ನ ಪ್ರಿಯಪತ್ನಿ ಅನುಷ್ಕಾಗೆ ಪ್ಲೈಯಿಂಗ್ ಕಿಸ್ ನೀಡಿದ್ದರು. ನಾನು ಈ ಶತಕವನ್ನು ನನ್ನ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಅರ್ಪಿಸುತ್ತೇನೆ. ನನ್ನ ಪಾಲಿಗೆ ಸ್ಪೂರ್ತಿಯಾಗಿರುವ ಅನುಷ್ಕಾ ಯಾವಾಗಲೂ ಧನಾತ್ಮಕ ಮನೋಭಾವ ಹೊಂದಲು ನೆರವಾಗುತ್ತಾರೆ. ಹೀಗಾಗಿ ಈ ಶತಕವನ್ನು ಅನುಷ್ಕಾಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. 

ಮೂರನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಗೆಲುವನ್ನು ಪ್ರವಾಹಕ್ಕೆ ತುತ್ತಾಗಿರುವ ಕೇರಳ ಜನತೆಗೆ ಅರ್ಪಿಸಿದ್ದರು. ಮೂರು ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಇದುವರೆಗೆ ಎರಡು ಶತಕ ಹಾಗೂ ಎರಡು ಅರ್ಧಶತಕಗಳ ನೆರವಿನಿಂದ 440 ರನ್ ಬಾರಿಸಿದ್ದಾರೆ.