ಕೊಹ್ಲಿಗೆ ಸಾಥ್ ಬೆಂಗಳೂರಿಗೆ ಬಂದಿಳಿದ ಅನುಷ್ಕಾ

First Published 12, Apr 2018, 5:24 PM IST
Anushka Sharma flies to Bengaluru to spend time with Virat Kohli
Highlights

ಈ ನಡುವೆ ಪತಿಯ ತಂಡವನ್ನು ಬೆಂಬಲಿಸಲು ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಅನುಷ್ಕಾ ಗ್ಯಾಲರಿಗಳಲ್ಲಿ ಕಾಣಿಸಿಕೊಂಡಾಗ ವಿರಾಟ್ ಕಳಪೆ ಪ್ರದರ್ಶನ ನೀಡಿದ್ದರು. ಇದಕ್ಕೆ ಅನೇಕರು ಅನುಷ್ಕಾರನ್ನು ದೂರಿದ್ದರು.

ಬೆಂಗಳೂರು(ಏ.12): ದಿನದಿಂದ ದಿನಕ್ಕೆ ಐಪಿಎಲ್ ಕಾವೇರತೊಡಗಿದ್ದು, ಶುಕ್ರವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌'ಸಿಬಿ ಹಾಗೂ ಪಂಜಾಬ್ ತಂಡಗಳು ಎದುರಾಗಲಿವೆ.

ಈ ನಡುವೆ ಪತಿಯ ತಂಡವನ್ನು ಬೆಂಬಲಿಸಲು ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಅನುಷ್ಕಾ ಗ್ಯಾಲರಿಗಳಲ್ಲಿ ಕಾಣಿಸಿಕೊಂಡಾಗ ವಿರಾಟ್ ಕಳಪೆ ಪ್ರದರ್ಶನ ನೀಡಿದ್ದರು. ಇದಕ್ಕೆ ಅನೇಕರು ಅನುಷ್ಕಾರನ್ನು ದೂರಿದ್ದರು.

ಆ ಸಂದರ್ಭದಲ್ಲಿ ವಿರಾಟ್, ಅನುಷ್ಕಾ ಬೆನ್ನಿಗೆ ನಿಂತಿದ್ದರು. ವಿರುಷ್ಕಾ ಜೋಡಿ ಬೆಂಗಳೂರಿನಲ್ಲಿ ತಾವು ಉಳಿದುಕೊಂಡಿರುವ ಹೋಟೆಲ್‌'ನಿಂದ ಹೊರ ಬರುತ್ತಿರುವ ದೃಶ್ಯ ಹಾಗೂ ಫೋಟೊಗಳು ವೈರಲ್ ಆಗಿವೆ.

loader