ಡಿ.22 ರಂದು ಮುಂಬೈನಲ್ಲಿ ನಡೆಯುವ ಅದ್ಧೂರಿ ಅರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್, ಕ್ರಿಕೆಟಿಗರು ಸೇರಿದಂತೆ ಹಲವು ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.

ರೋಮ್(ಡಿ.11): ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಕೋಟ್ಯಂತರ ಅಭಿಮಾನಿಗಳಿಗೆ ಸಂತಸದ ಸುದ್ದಿ. ಸ್ಫೋಟಕ ಆಟಗಾರ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ(29) ಬೆಂಗಳೂರು ಮೂಲದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ(29) ಅವರನ್ನು ವರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಟಲಿಯ ಮಿಲನ್ ನಗರದಲ್ಲಿ ಕೆಲವೇ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಇಂದು ನಡೆದ ಮದುವೆಯಲ್ಲಿ ಕೊಹ್ಲಿ ಅನುಷ್ಕ ಶರ್ಮಾ'ರನ್ನು ವಿವಾಹವಾಗಿದ್ದಾರೆ. ಶುಭ ಸಮಾರಂಭದಲ್ಲಿ ಕೊಹ್ಲಿ,ಅನುಷ್ಕ ಶರ್ಮಾ ಅವರ ಕುಟುಂಬದ ಸದಸ್ಯರು ಹಾಗೂ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಶಾರೂಕ್ ಖಾನ್, ಅಮೀರ್ ಖಾನ್, ಕರಣ್ ಜೋಹರ್,ಕತ್ರೀನಾ ಕೈಫ್ ಮಾತ್ರವೇ ಹಾಜರಿದ್ದರು.

ಡಿ.22 ರಂದು ಮುಂಬೈನಲ್ಲಿ ನಡೆಯುವ ಅದ್ಧೂರಿ ಅರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್, ಕ್ರಿಕೆಟಿಗರು ಸೇರಿದಂತೆ ಹಲವು ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ವಿವಾಹವಾಗುವ ಕಾರಣದಿಂದಲೇ ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದರು.

ಟ್ವಿಟರ್'ನಲ್ಲಿ ದೃಢಪಡಿಸಿದ ದಂಪತಿಗಳು

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಟ್ವಿಟರ್'ನಲ್ಲಿ ತಮ್ಮ ಮದುವೆ ಫೋಟೊ'ಗಳನ್ನು ಟ್ವೀಟಿಸುವುದರ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂಬುದನ್ನು ದೃಢಪಡಿಸಿದ್ದಾರೆ.