ಮುಂಬೈ(ಸೆ.06): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಬ್ಬರು ತಮ್ಮ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ಕೊಹ್ಲಿ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದರೆ, ಪತ್ನಿ ಅನುಷ್ಕಾ ಶರ್ಮಾ ಸುಯಿ ಧಾಗ್ ಬಾಲಿವುಡ್ ಚಿತ್ರದ ಪ್ರಮೋಶನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಚಿತ್ರದ ಪ್ರಮೋಶನ್‌ಗಾಗಿ ಎಲ್ಲೇ ಹೋದರೂ ಪತಿ ಕೊಹ್ಲಿ ಕುರಿತು ಪ್ರಶ್ನೆಗಳೇ ಹೆಚ್ಚು. ಇದೀಗ ಸುಯಿ ಧಾಗ ಚಿತ್ರದ ಪ್ರಚಾರದ  ವೇಳೆ ಕೊಹ್ಲಿ ಕುರಿತು ಅನುಷ್ಕಾ ಮನ ಬಿಚ್ಚಿ ಮಾತನಾಡಿದ್ದಾರೆ.

 

 

ಚಿತ್ರದ ನಾಯಕ ನಟ ವರುಣ್ ಧವನ್, ಕ್ರಿಕೆಟ್ ಜೊತೆಗಿನ ಪ್ರೀತಿ ಹಾಗೂ ಸ್ಪೂರ್ತಿ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ ನನ್ನ ಮನನಸ್ಸನ್ನ ಹಿಡಿತದಲ್ಲಿಟ್ಟಿದ್ದೇನೆ ಎಂದು ಉತ್ತರದಿಂದ ನುಣುಚಿಕೊಂಡರು. ಆದರೆ ವರುಣ್ ಧವನ್ ಇಂದು ಕೊಹ್ಲಿ ಕುರಿತು ಅನುಷ್ಕಾ ಮನಬಿಚ್ಚಿ ಮಾತನಾಡಲೇಬೇಕು ಎಂದು ಅಭಿಮಾನಿಗಳ ಪರ ಆಗ್ರಹಿಸಿದರು.

ಇದನ್ನೂ ಓದಿ: ಕೊಹ್ಲಿ ಹೆಸರು ಕೂಗಿದಾಗ ನಾಚಿ ನೀರಾದ ಅನುಷ್ಕಾ

ವಿಶ್ವದ ಸರ್ವ ಶ್ರೇಷ್ಠ ವ್ಯಕ್ತಿಯನ್ನ ಮದುವೆಯಾಗಿದ್ದೇನೆ. ಇದೇ ನನ್ನ ಪಾಲಿನ ಸೌಭಾಗ್ಯ ಎಂದು ಅನುಷ್ಕಾ ಶರ್ಮಾ ಸಂದರ್ಶನದಲ್ಲಿ ಹೇಳಿದ್ದಾರೆ.  ಇತ್ತೀಚೆಗಷ್ಟೇ ಜೈಪುರದಲ್ಲಿ ನಡೆದ ಚಿತ್ರದ ಪ್ರಚಾರದ ಕಾರ್ಯದಲ್ಲಿ ಅನುಷ್ಕಾ ಮಾತು ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿದ್ದರು.