ಕೊಹ್ಲಿ ಹೆಸರು ಕೂಗಿದಾಗ ನಾಚಿ ನೀರಾದ ಅನುಷ್ಕಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Sep 2018, 12:20 PM IST
Fans chants Kohli name in front of Anushka sharma at Sui dhag promotion
Highlights

ಸುಯಿ ಧಾಗ್ ಚಿತ್ರದ ಪ್ರಮೋಶನ್‌ಗಾಗಿ ಸ್ಟೇಜ್ ಮೇಲೆ ಬಂದ  ನಟಿ ಅನುಷ್ಕಾ ಶರ್ಮಾಗೆ, ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿ ಮಾತನಾಡಲು ಅವಕಾಶವೇ ನೀಡಲಿಲ್ಲ. ಅಭಿಮಾನಿಗಳ ಕೂಗಿಗೆ ಅನುಷ್ಕಾ ಹೇಳಿದ್ದೇನು? ಇಲ್ಲಿದೆ.

ಜೈಪುರ(ಸೆ.03): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತರೂ, ನಾಯಕ ವಿರಾಟ್ ಕೊಹ್ಲಿ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಹ್ಲಿ ಮೇಲಿನ ಅಭಿಮಾನಿಗಳ ಪ್ರೀತಿ ಬಾಲಿವುಡ್ ಸುಯಿ ಧಾಗ ಚಿತ್ರದ ಪ್ರಮೋಶನ್ ವೇಳೆಯೂ ಕಂಡು ಬಂತು. 

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಬಹು ನಿರೀಕ್ಷಿತ ಚಿತ್ರ ಸುಯಿ ಧಾಗ್ ಚಿತ್ರದ ಪ್ರಮೋಶನ್‌ಗಾಗಿ ಜೈಪುರಕ್ಕೆ ತೆರಳಿದ್ದರು. ಸ್ಟೇಜ್ ಮೇಲೆ ಬಂದ ಅನುಷ್ಕಾ ಹಾಗೂ ಚಿತ್ರದ ನಾಯಕ, ನಟ ವರುಣ್ ಧವನ್‌ಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು.

ಚಿತ್ರದ ಪ್ರಮೋಶನ್ ಕುರಿತು ಅನುಷ್ಕಾ ಮಾತನಾಡು ಮೈಕ್ ಹಿಡಿಯುತ್ತಿದ್ದಂತೆ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿದರು. ಅಭಿಮಾನಿಗಳ ಕೂಗಾಟಕ್ಕೆ ಅನುಷ್ಕಾಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ.

 

 

ಅಭಿಮಾನಿಗಳ ನಿಧಾನವಾಗಿ ಶಾಂತವಾಗುತ್ತಿದ್ದಂತೆ ಅನುಷ್ಕಾ ಶರ್ಮಾ ಎಲ್ಲರಿಗೂ ಕೊಹ್ಲಿ ಮೇಲೆ ಪ್ರಿತಿ ಇದೆ, ನನಗೂ ಇದೆ. ಎಲ್ಲರಿಗೂ ಕೊಹ್ಲಿಯ ನೆನಪಾಗುತ್ತಿದೆ. ನನಗೂ ಆಗುತ್ತಿದೆ ಎಂದು ಅನುಷ್ಕಾ ಮಾತು ಮುಗಿಸಿದರು.
 

loader