Asianet Suvarna News Asianet Suvarna News

ಉದ್ಘಾಟನೆಗೆ ರೆಡಿಯಾಗಿದೆ ಹಿಮಾಚಲದ ನೂತನ ಕ್ರೀಡಾಂಗಣ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಈಗಾಗಲೇ ಹಿಮಾಚಲ ಕ್ರಿಕೆಟ್ ಸಂಸ್ಥೆಯ ಅಂತರಾಷ್ಟ್ರೀಯ ಮೈದಾನವಿದೆ.

Anurag Thakur to inaugurate another cricket stadium in Himachal Pradesh
  • Facebook
  • Twitter
  • Whatsapp

ಶಿಮ್ಲಾ(ಮೇ.25): ಹಿಮಾಚಲ ಪ್ರದೇಶದಲ್ಲಿ ಐದನೇ ಕ್ರಿಕೆಟ್ ಕ್ರೀಡಾಂಗಣ ಶೀಘ್ರದಲ್ಲಿ ಅನಾವರಣಗೊಳ್ಳಲಿದೆ.

ಜೂನ್ 1ರಂದು ಕ್ರೀಡಾಂಗಣದ ಉದ್ಘಾಟನೆಯನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ನೇರವೇರಿಸಲಿದ್ದಾರೆ.

ಶಿಮ್ಲಾ ಜಿಲ್ಲೆಯ ಗುಮ್ಮಾ ಪ್ರದೇಶದಲ್ಲಿ ನೂತನ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದು ಸಮುದ್ರ ಮಟ್ಟದಿಂದ 5,500 ಅಡಿಗಳ ಮೇಲ್ಮಟ್ಟದಲ್ಲಿ ಇದೆ ಎನ್ನಲಾಗಿದೆ. ನೂತನ ಕ್ರೀಡಾಂಗಣದಲ್ಲಿ ಪೆವಿಲಿಯನ್, ಡ್ರೆಸ್ಸಿಂಗ್ ಕೋಣೆಗಳು, ನಾಲ್ಕು ಟರ್ಫ್ ವಿಕೆಟ್‌'ಗಳ ಪಿಚ್‌ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಈಗಾಗಲೇ ಹಿಮಾಚಲ ಕ್ರಿಕೆಟ್ ಸಂಸ್ಥೆಯ ಅಂತರಾಷ್ಟ್ರೀಯ ಮೈದಾನವಿದೆ. ಇಲ್ಲಿ ಒಟ್ಟು 12 ಅಂತರಾಷ್ಟ್ರಿಯ ಪಂದ್ಯಗಳು ನಡೆದಿವೆ. ಧರ್ಮಶಾಲ ಮಾತ್ರವಲ್ಲದೇ, ಅಮ್ತಾರ್, ಬಿಸ್ಲಾಪುರ್'ನಲ್ಲಿ ಕ್ರಿಕೆಟ್ ಮೈದಾನಗಳಿವೆ.

Follow Us:
Download App:
  • android
  • ios