Wrestlers Protest: ಕುಸ್ತಿಪಟುಗಳಿಗೆ ನ್ಯಾಯ ಸಿಗಲಿ, ಶೀಘ್ರ ಚಾರ್ಜ್ಶೀಟ್ ಸಲ್ಲಿಕೆ: ಅನುರಾಗ್ ಠಾಕೂರ್
ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ತುಟಿಬಿಚ್ಚಿದ ಅನುರಾಗ್ ಠಾಕೂರ್
ಕುಸ್ತಿಪಟುಗಳ ಪ್ರತಿಭಟನೆ ಬೆನ್ನಲ್ಲೇ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂದ ಠಾಕೂರ್
ಬ್ರಿಜ್‌ಭೂಷಭ್ ಸಿಂಗ್ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು
ನವದೆಹಲಿ(ಜೂ.04): ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಸೇರಿದಂತೆ ಗಂಭೀರ ಆರೋಪಗಳನ್ನು ಹೊತ್ತುಕೊಂಡಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯೂಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಶೀಘ್ರ ಚಾಜ್ರ್ಶೀಟ್ ಸಲ್ಲಿಕೆಯಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅದನ್ನು ಎಲ್ಲರೂ ಪಾಲಿಸಬೇಕು. ತನಿಖಾ ಪ್ರಕ್ರಿಯೆ ಶೀಘ್ರದಲ್ಲಿ ಮುಕ್ತಾಯಗೊಳ್ಳಬೇಕೆಂದು ನಾವೂ ಆಶಿಸುತ್ತೇವೆ. ಶೀಘ್ರದಲ್ಲೇ ಜಾರ್ಜ್ಶೀಟ್ ಕೂಡಾ ಸಲ್ಲಿಕೆಯಾಗಬಹುದು ಎಂದಿದ್ದಾರೆ. ಕ್ರೀಡಾಪಟು ಅಥವಾ ಮಹಿಳೆ ಯಾರೇ ಇರಲಿ, ಸರ್ಕಾರ ಅವರಿಗೆ ನ್ಯಾಯ ಒದಗಿಸಲಿದೆ. ಪ್ರತೀ ಹಂತದಲ್ಲೂ ಕೇಂದ್ರ ಸರ್ಕಾರ ಕುಸ್ತಿಪಟುಗಳು ಎಲ್ಲಾ ಬೇಡಿಕೆಗಳನ್ನು ಆಲಿಸುತ್ತಿದೆ’ ಎಂದು ಠಾಕೂರ್ ಹೇಳಿದ್ದಾರೆ.
ಆಗಸ್ಟ್ನಲ್ಲಿ 2ನೇ ಆವೃತ್ತಿ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್
ಬೆಂಗಳೂರು: 2ನೇ ಆವೃತ್ತಿಯ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಲೀಗ್(ಜಿಪಿಬಿಎಲ್) ಬೆಂಗಳೂರಿನಲ್ಲಿ ಆಗಸ್ಟ್ನಲ್ಲಿ ನಡೆಯಲಿದ್ದು, ಜೂ. 22ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಆಯೋಜಕರು ಶನಿವಾರ ಪ್ರಕಟಿಸಿದ್ದಾರೆ. ಚೊಚ್ಚಲ ಆವೃತ್ತಿಯಲ್ಲಿ 8 ತಂಡಗಳು ಭಾಗಿಯಾಗಿದ್ದು, ಈ ಬಾರಿ 2 ಹೊಸ ತಂಡಗಳು ಸೇರ್ಪಡೆಯಾಗಲಿವೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೇರಳ, ಮುಂಬೈ, ಪುಣೆ, ಅಹಮದಾಬಾದ್, ದೆಹಲಿ, ಲಖನೌ ಹಾಗೂ ಒಡಿಶಾ ತಂಡಗಳು ಪಾಲ್ಗೊಳ್ಳಲಿದ್ದು, ಜೂ.10ರಂದು ಹರಾಜು ನಡೆಯಲಿದೆ. ಟೂರ್ನಿಯಲ್ಲಿ 35 ದೇಶಗಳ ಆಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, 350 ಭಾರತೀಯ, 52 ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಥಾಯ್ಲೆಂಡ್ ಓಪನ್: ಸೆಮೀಸ್ನಲ್ಲಿ ಸೋತು ಹೊರಬಿದ್ದ ಲಕ್ಷ್ಯ ಸೇನ್
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸುವ ಮೂಲಕ ಭಾರತದ ತಾರಾ ಶಟ್ಲರ್ ಮತ್ತೊಮ್ಮೆ ಪದಕದಿಂದ ವಂಚಿತರಾಗಿದ್ದಾರೆ.
ಈ ಋುತುವಿನಲ್ಲಿ ಮೊದಲ ಬಾರಿ ಸೆಮೀಸ್ಗೇರಿದ್ದ ವಿಶ್ವ ನಂ.23 ಸೇನ್, ಶನಿವಾರ ಥಾಯ್ಲೆಂಡ್‌ನ ಕುನ್ಲಾವುಟ್ ವಿರುದ್ಧ 21-13, 17-21, 13-21ರಲ್ಲಿ ಪರಾಭವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು. ಶನಿವಾರ 1 ಗಂಟೆ 15 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯದಲ್ಲಿ ಸೇನ್ ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿದ್ದರು. ಆದರೆ 2ನೇ ಸೆಟ್ನಲ್ಲಿ ಸೇನ್‌ಗೆ ತೀವ್ರ ಪೈಪೋಟಿ ಎದುರಾಯಿತು. ಕಠಿಣ ಹೋರಾಟದ ಹೊರತಾಗಿಯೂ 17-21ರಿಂದ ಸೋತ ಸೇನ್‌ಗೆ ಕೊನೆ ಗೇಮ್ನಲ್ಲೂ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ.
ಖೇಲೋ ವಿವಿ ಗೇಮ್ಸ್‌ಗೆ ಅದ್ಧೂರಿ ತೆರೆ; ಪಂಜಾಬ್ ಚಾಂಪಿಯನ್
ಸೇನ್ ಇತ್ತೀಚಿನ ದಿನಗಳಲ್ಲಿ ತಮ್ಮ ಎಂದಿನ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಕಳೆದ ವರ್ಷ ವಿಶ್ವ ರಾರಯಂಕಿಂಗ್ನಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದ್ದ ಸೇನ್ ಸದ್ಯ 23ನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಇಂಡೋನೇಷ್ಯಾ ಮಾಸ್ಟರ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ಇತರೆ ಟೂರ್ನಿಗಳಲ್ಲಿ ಮುಗ್ಗರಿಸಿದ್ದಾರೆ.
ಪ್ರೊ ಲೀಗ್: ಶೂಟೌಟ್ನಲ್ಲಿ ಬ್ರಿಟನ್ ವಿರುದ್ಧ ಗೆದ್ದ ಭಾರತ
ಲಂಡನ್: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶನಿವಾರ ಭಾರತ ತಂಡ ಬ್ರಿಟನ್ ವಿರುದ್ಧ ಶೂಟೌಟ್ನಲ್ಲಿ 4-2 ಗೋಲುಗಳಿಂದ ಗೆಲುವು ಸಾಧಿಸಿದ್ದು, ಕಳೆದ ವಾರದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು. ಗೆಲುವಿನ ಹೊರತಾಗಿಯೂ ಭಾರತ ಅಂಕಪಟ್ಟಿಯಲ್ಲಿ 24 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಇದ್ದು, ಬ್ರಿಟನ್ 26 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಆರಂಭದಿಂದಲೇ ಉಭಯ ತಂಡಗಳಿಂದಲೂ ತೀವ್ರ ಪೈಪೋಟಿ ಕಂಡುಬಂತು. ಮೊದಲಾರ್ಧಕ್ಕೆ ಭಾರತ 3-1ರಿಂದ ಮುಂದಿದ್ದರೂ ಪುಟಿದೆದ್ದ ಬ್ರಿಟನ್ ಪಂದ್ಯ ಸಮಬಲಗೊಳಿಸಲು ಯಶಸ್ವಿಯಾಯಿತು. ಬಳಿಕ ಫಲಿತಾಂಶ ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. ಭಾರತ ಪರ ಅಭಿಷೇಕ್, ಲಲಿತ್, ಹರ್ಮನ್ಪ್ರೀತ್, ಮನ್ಪ್ರೀತ್ ಗೋಲು ಹೊಡದರೆ, ಬ್ರಿಟನ್ 2 ಗೋಲು ಮಾತ್ರ ದಾಖಲಿಸಿತು.