ಮುಂಬೈ: ಮುಂದಿನ ತಿಂಗಳು 7 ರಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆರಂಭವಾಗುವ ವಿಶ್ವಕಪ್ ಕಬಡ್ಡಿ ಟೂರ್ನಿಗಾಗಿ 14 ಮಂದಿ ಆಟಗಾರರಿರುವ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಭಾರತ ಕಬಡ್ಡಿ ತಂಡದ ಜೆರ್ಸಿಯನ್ನು ಬಿಡುಗಡೆ ಮಾಡಿದರು. ಭಾರತ ಸೇರಿದಂತೆ 12 ರಾಷ್ಟ್ರಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಭಾರತ ತಂಡದಲ್ಲಿ ಪ್ರಭಾವಿ ಆಟಗಾರರ ದೊಡ್ಡ ದಂಡೇ ಇದೆ.
ತಂಡ ಇಂತಿದೆ:
ಅನೂಪ್ ಕುಮಾರ್ (ನಾಯಕ), ಅಜಯ್ ಠಾಕೂರ್, ದೀಪಕ್ ಹೂಡಾ, ಧರ್ಮರಾಜ್ ಚೇರ್ಲಾಥನ್, ಜಸ್ವೀರ್ ಸಿಂಗ್, ಕಿರಣ್ ಪಾರ್ಮರ್, ಮಂಜೀತ್ ಚಿಲ್ಲಾರ್, ಮೋಹಿತ್ ಚಿಲ್ಲಾರ್, ನಿತಿನ್ ತೋಮರ್, ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ, ಸಂದೀಪ್ ನರ್ವಾಲ್, ಸುರೇಂದ್ರ ನಾಡ ಮತ್ತು ಸುರ್ಜಿತ್.
