ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡ ಪಾಕಿಸ್ತಾನ ತಂಡ ತನ್ನ ಈ ಗೆಲುವಿನ ಬಳಿಕ ICC ಏಕದಿನ ತಂಡದ ರ್ಯಾಂಕಿಂಗ್'ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೇರಿದೆ. ಆದರೆ ಇತ್ತ ಫೈನಲ್'ಗೆ ತಲುಪಿ ದ ಟೀಂ ಇಂಡಿಯಾ ಮಾತ್ರ ಮೂರನೇ ಸ್ಥಾನಕ್ಕಿಳಿದಿದೆ. ಶ್ರೀಲಂಕಾ ಹಾಗೂ ಬಾಂಗ್ಲಾವನ್ನು ಸೋಲಿಸಿದ ಪಾಕ್ ತಂಡ 2019ರ ವಿಶ್ವಕಪ್'ಗೆ ನೇರವಾಗಿ ಅರ್ಹತೆ ಪಡೆಯುವ ಸಮೀಪ ತಲುಪಿದೆ. ಪಾಕಿಸ್ತಾನಕ್ಕೆ ನಾಲ್ಕು ಅಂಕಗಳ ಲಾಭವಾಗಿದ್ದು, ಇದರಿಂದ ತಂಡದ ಮೊತ್ತ 95 ಆಗಿದೆ. ಯಾಕೆಂದರೆ ಈ ಟೂರ್ನಮೆಂಟ್'ನಲ್ಲಿ ಪಾಕ್ ಸೋಲಿಸಿದ್ದು ಅತ್ಯಂತ ಎತ್ತರದ ಶ್ರೇಣಿಯಲ್ಲಿದ್ದ ತಂಡಗಳನ್ನು ಸೋಲಿಸಿದೆ. ಅಂದರೆ ಸೆಮಿಫೈನಲ್'ನಲ್ಲಿ ಇಂಗ್ಲೆಂಡ್ ಹಾಗೂ ಫೈನಲ್'ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದೆ.
ನವದೆಹಲಿ(ಜೂ.20): ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡ ಪಾಕಿಸ್ತಾನ ತಂಡ ತನ್ನ ಈ ಗೆಲುವಿನ ಬಳಿಕ ICC ಏಕದಿನ ತಂಡದ ರ್ಯಾಂಕಿಂಗ್'ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೇರಿದೆ. ಆದರೆ ಇತ್ತ ಫೈನಲ್'ಗೆ ತಲುಪಿ ದ ಟೀಂ ಇಂಡಿಯಾ ಮಾತ್ರ ಮೂರನೇ ಸ್ಥಾನಕ್ಕಿಳಿದಿದೆ. ಶ್ರೀಲಂಕಾ ಹಾಗೂ ಬಾಂಗ್ಲಾವನ್ನು ಸೋಲಿಸಿದ ಪಾಕ್ ತಂಡ 2019ರ ವಿಶ್ವಕಪ್'ಗೆ ನೇರವಾಗಿ ಅರ್ಹತೆ ಪಡೆಯುವ ಸಮೀಪ ತಲುಪಿದೆ. ಪಾಕಿಸ್ತಾನಕ್ಕೆ ನಾಲ್ಕು ಅಂಕಗಳ ಲಾಭವಾಗಿದ್ದು, ಇದರಿಂದ ತಂಡದ ಮೊತ್ತ 95 ಆಗಿದೆ. ಯಾಕೆಂದರೆ ಈ ಟೂರ್ನಮೆಂಟ್'ನಲ್ಲಿ ಪಾಕ್ ಸೋಲಿಸಿದ್ದು ಅತ್ಯಂತ ಎತ್ತರದ ಶ್ರೇಣಿಯಲ್ಲಿದ್ದ ತಂಡಗಳನ್ನು ಸೋಲಿಸಿದೆ. ಅಂದರೆ ಸೆಮಿಫೈನಲ್'ನಲ್ಲಿ ಇಂಗ್ಲೆಂಡ್ ಹಾಗೂ ಫೈನಲ್'ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದೆ.
ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ಸ್ ಆಗಿ ಕಣಕ್ಕಿಳಿದ ವಿರಾಟ್ ನೇತೃತ್ವದ ಟೀಂ ಇಂಡಿಯಾ ಟೂರ್ನಮೆಂಟ್'ಗೂ ಮೊದಲು 118 ಅಂಕಗಳೊಂದಿಗೆ, ವನ್ ಡೇ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಲಂಡನ್'ನಲ್ಲಿ ರವಿವಾರದಂದು ನಡೆದ ಫೈನಲ್'ನಲ್ಲಿ 180 ರನ್'ಗಳ ಅತಿ ದೊಡ್ಡ ಸೋಲಿನ ಬಳಿಕ ಅದು ಒಂದು ಸ್ಥಾನ ಕೆಳಗಿಳಿದಿದೆ. ಅಲ್ಲದೇ ಎರಡು ಅಂಕಗಳ ನಷ್ವೂ ಆಗಿರುವುದರಿಂದ, ಸದ್ಯ 116 ರೇಟಿಂಗ್ ಅಂಕಗಳಾಗಿವೆ.
ಲೀಗ್ ಪಂದ್ಯದಲ್ಲೇ ಸೋಲನುಭವಿಸಿ ಹೊರಗುಳಿದ ಆಸ್ಟ್ರೇಲಿಯಾ ತಂಡ 117 ಅಂಕಗಳೊಂದಿಗೆ ರೇಟಿಂಗ್'ನಲ್ಲಿ ಟೀಂ ಇಂಡಿಯಾಗಿಂತ ಒಂದು ಸ್ಥಾನ ಮೇಲಿದೆ. ದಕ್ಷಿಣ ಆಫ್ರಿಕಾ ತಂಡ ಕೂಡಾ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆದರೂ ಈ ತಂಡ 119 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದೆ.
ಇನ್ನು ಇತರ ತಂಟಗಳ ರ್ಯಾಂಕಿಂಗ್'ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ ಆದರೆ ಭಾರತ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಈ ಎಲ್ಲಾ ತಂಡಗಳು ಒಂದೊಂದು ಸ್ಥಾನ ಕುಸಿದಿವೆ.
