ಪ್ರಧಾನ ಕೋಚ್ ಹುದ್ದೆ ನಿರ್ವಹಿಸಲು ರವಿಶಾಸ್ತ್ರಿ ವರ್ಷಕ್ಕೆ ₹7 ಕೋಟಿಯಿಂದ ₹7.5 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುತೂಹಲಕಾರಿ ಅಂಶವೆಂದರೆ ಅನಿಲ್ ಕುಂಬ್ಳೆ ಕೋಚ್‌'ಗಳ ಸಂಭಾವನೆಯನ್ನು ಹೆಚ್ಚಿಸಬೇಕು ಎಂದು ಪ್ರಸ್ತಾಪಿಸಿದ್ದರು.

ಮುಂಬೈ(ಜು.17): ಪ್ರಧಾನ ಕೋಚ್ ಹುದ್ದೆ ನಿರ್ವಹಿಸಲು ರವಿಶಾಸ್ತ್ರಿ ವರ್ಷಕ್ಕೆ ₹7 ಕೋಟಿಯಿಂದ ₹7.5 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುತೂಹಲಕಾರಿ ಅಂಶವೆಂದರೆ ಅನಿಲ್ ಕುಂಬ್ಳೆ ಕೋಚ್‌'ಗಳ ಸಂಭಾವನೆಯನ್ನು ಹೆಚ್ಚಿಸಬೇಕು ಎಂದು ಪ್ರಸ್ತಾಪಿಸಿದ್ದರು.

ತಮ್ಮ ಪ್ರಸ್ತಾಪ ದಲ್ಲಿ ಕುಂಬ್ಳೆ, ಕೋಚ್‌ಗೆ ₹7 ಕೋಟಿ ಸಂಭಾವನೆ ನೀಡಬೇಕು ಎಂದಿದ್ದರು. ಆದರೆ 7 ವರ್ಷಗಳ ಹಿಂದೆ ತಂಡದ ನಿರ್ದೇಶಕರಾಗಿದ್ದಾಗಲೇ ರವಿಶಾಸ್ತ್ರಿ ವಾರ್ಷಿಕ 7ರಿಂದ 7.5 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.

ಮಾಧ್ಯಮಗಳೊಂದಿಗಿನ ಒಪ್ಪಂದಗಳು, ವೀಕ್ಷಕ ವಿವರಣೆ ಇದೆಲ್ಲವನ್ನೂ ಬಿಟ್ಟಿದ್ದ ಶಾಸ್ತ್ರಿಗೆ ಪರಿಹಾರವಾಗಿ ಬಿಸಿಸಿಐ ಅಷ್ಟೊಂದು ಸಂಭಾವನೆ ನೀಡುತ್ತಿತ್ತು. ಸಹಾಯಕ ಕೋಚ್‌'ಗಳಾದ ಬಾಂಗರ್, ಶ್ರೀಧರ್‌'ಗೆ ವಾರ್ಷಿಕ ₹2 ಕೋಟಿ ಸಂಭಾವನೆ ನಿಗದಿ ಮಾಡಲಾಗುತ್ತಿದೆ. ದ್ರಾವಿಡ್ ₹5 ಕೋಟಿ ಪಡೆಯಲಿದ್ದಾರೆ. ಇನ್ನು ಜಹೀರ್ ಸಂಭಾವನೆ ಎಷ್ಟು ಎನ್ನುವುದಿನ್ನೂ ಅಂತಿಮವಾಗಿಲ್ಲ .