ಇದರೊಂದಿಗೆ ಭಾರತ ಉಲನ್ ಬತಾರ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ 1 ಚಿನ್ನ, 1 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ ಒಟ್ಟು 5 ಪದಕ ಗಳಿಸಿತು.

ನವದೆಹಲಿ(ಜೂ.25): ಭಾರತದ ಭರವಸೆಯ ಯುವ ಬಾಕ್ಸರ್ ಅಂಕುಶ್ ದಹಿಯಾ ಮಂಗೋಲಿಯಾದಲ್ಲಿ ನಡೆಯುತ್ತಿರುವ ಉಲನ್ ಬತಾರ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರೆ, ದೇವೇಂದ್ರೊ ಸಿಂಗ್ ಬೆಳ್ಳಿ ಪದಕಕ್ಕೆ ಕೊರಲೊಡಿದ್ದಾರೆ.

ಇಂದು ನಡೆದ 60 ಕೆಜಿ ಫೈನಲ್‌'ನಲ್ಲಿ 19 ವರ್ಷದ ಅಂಕುಶ್, ಕೊರಿಯಾದ ಮ್ಯಾನ್ ಚೋ ಚೊಲ್‌'ರನ್ನು ಮಣಿಸುವ ಮೂಲಕ ಚಿನ್ನದ ಪದಕ ಜಯಿಸಿದರು.

ಇನ್ನು 52 ಕೆಜಿ ವಿಭಾಗದ ಫೈನಲ್‌'ನಲ್ಲಿ ದೇವೇಂದ್ರೊ ಸಿಂಗ್, ಇಂಡೋನೆಷಿಯಾದ ಆಲ್ಡೊಮ್ಸ್ ಸುಗುರೊ ವಿರುದ್ಧ ಸೋಲುಂಡು ಬೆಳ್ಳಿಗೆ ತೃಪ್ತರಾದರು. ಇದರೊಂದಿಗೆ ಭಾರತ ಉಲನ್ ಬತಾರ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ 1 ಚಿನ್ನ, 1 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ ಒಟ್ಟು 5 ಪದಕ ಗಳಿಸಿತು.

ಶನಿವಾರ ನಡೆದ ಸೆಮಿಫೈನಲ್‌'ನಲ್ಲಿ ಸೋಲನುಭವಿಸಿದ್ದ ಕೆ.ಶ್ಯಾಮ್ ಕುಮಾರ್ (49 ಕೆಜಿ), ಮೊಹಮ್ಮದ್ ಹುಸ್ಸಮುದ್ದಿನ್ (56 ಕೆಜಿ) ಹಾಗೂ ಪ್ರಿಯಾಂಕ ಚೌಧರಿ (60 ಕೆಜಿ) ಕಂಚಿನ ಪದಕ ಗಳಿಸಿದ್ದರು.