ರಿಯೊ ಒಲಿಂಪಿಕ್ಸ್'ನಲ್ಲಿ ನಿರಾಸೆ ಮೂಡಿಸಿದ ಭಾರತೀಯ ಶೂಟರ್'ಗಳು ಈ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ.

ನವದೆಹಲಿ(ಫೆ.27): ಭಾರತದ ಸ್ಟಾರ್ ಶೂಟರ್'ಗಳಾದ ಹೀನಾ ಸಿಧು ಮತ್ತು ಜಿತು ರೈ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡರೆ, ಪುರುಷರ ಡಬಲ್ಸ್ ಟ್ರ್ಯಾಕ್ ವಿಭಾಗದಲ್ಲಿ ಅಂಕುರ್ ಮಿತ್ತಲ್ ಬೆಳ್ಳಿ ಗೆದ್ದು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್'ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ ವಿಶ್ವಕಪ್ ಟೂರ್ನಿಯಲ್ಲಿ ಈ ಶೂಟರ್'ಗಳು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ತಂಡ ವಿಭಾಗದಲ್ಲಿ ಹೀನಾ ಸಿಧು ಹಾಗೂ ಜಿತು ರೈ ಜೋಡಿ ಜಪಾನ್ ತಂಡವನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿತು. ರಿಯೊ ಒಲಿಂಪಿಕ್ಸ್'ನಲ್ಲಿ ನಿರಾಸೆ ಮೂಡಿಸಿದ ಭಾರತೀಯ ಶೂಟರ್'ಗಳು ಈ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ.

2020ರ ಟೋಕಿಯೊ ಒಲಿಂಪಿಕ್ಸ್'ನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಶೂಟರ್ ಭರ್ಜರಿ ಆರಂಭವನ್ನೇ ಮಾಡಿದ್ದಾರೆ.