ಇದರೊಂದಿಗೆ ಕುಂಬ್ಳೆ ಜೊತೆಗಿನ ಒಪ್ಪಂದ ಪೂರ್ಣಗೊಂಡಂತಾಗಿದೆ.
ನವದೆಹಲಿ(ಆ.09): ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರ 1 ಕೋಟಿ ರೂ. ಬಾಕಿಯನ್ನು ಪಾವತಿಸಿದೆ. ಕುಂಬ್ಳೆ ಕೋಚ್ ಆಗಿದ್ದಾಗ ಅವರೊಂದಿಗಿನ ಮಾಡಿಕೊಂಡ ಒಪ್ಪಂದ ಇದಾಗಿದೆ. ಇದರೊಂದಿಗೆ ಕುಂಬ್ಳೆ ಜೊತೆಗಿನ ಒಪ್ಪಂದ ಪೂರ್ಣಗೊಂಡಂತಾಗಿದೆ.
ಬಿಸಿಸಿಐ ತನ್ನ ಅಧಿಕೃತ ವೆಬ್'ಸೈಟ್'ನಲ್ಲಿ ಮಾಸಿಕ ಅಭ್ಯಾಸ'ದಂತೆ 25 ಲಕ್ಷಕ್ಕೂ ಹೆಚ್ಚು ಮೊತ್ತ ಪಾವತಿಸಿರುವ ವಿವರವನ್ನು ಬಹಿರಂಗ ಮಾಡಿದೆ. ಕುಂಬ್ಳೆ ಅವರಿಗೆ ಈಗಾಗಲೇ ಮೇ ಹಾಗೂ ಜೂನ್ ತಿಂಗಳ 48.75 ಲಕ್ಷ ರೂ. ಪಾವತಿಸಲಾಗಿದೆ.
