Asianet Suvarna News Asianet Suvarna News

ಕೆರ್ಬರ್'ಗೆ ಮತ್ತೆ ನಂಬರ್ 1 ಪಟ್ಟ!

ಇದೀಗ ಗಾಯದ ಕಾರಣ ಇಂಡಿಯಾನ ವೆಲ್ಸ್ ಹಾಗೂ ಮಿಯಾಮಿ ಓಪನ್ ಟೂರ್ನಿಯಿಂದ ದೂರ ಉಳಿದಿರುವ ಸೆರೆನಾ ಸ್ಥಾನವನ್ನು ಕೆರ್ಬರ್ ತಮ್ಮದಾಗಿಸಿಕೊಂಡಿದ್ದಾರೆ.

Angelique Kerber reclaims top spot from Serena Williams in WTA rankings

ಫ್ಲಾರಿಡಾ(ಮಾ.21): ಮಹಿಳಾ ಟೆನಿಸ್ ಸಂಸ್ಥೆಯ ಶ್ರೇಯಾಂಕ ಪಟ್ಟಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನು ಹಿಂದಿಕ್ಕಿರುವ ಜರ್ಮನಿಯ ಆ್ಯಂಜಿಲಿಕ್ ಕೆರ್ಬರ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

6 ತಿಂಗಳ ಹಿಂದಷ್ಟೇ ಸತತ 186 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದ ಸೆರೆನಾ ಅವರಿಂದ ಕೆರ್ಬೆರ್ ನಂಬರ್ 1 ಸ್ಥಾನ ಕಸಿದುಕೊಂಡಿದ್ದರು. ಆದರೆ, ಆಸ್ಟ್ರೇಲಿಯನ್ ಓಪನ್‌'ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸೆರೆನಾ ವಿಶ್ವದ ಅಗ್ರ ಆಟಗಾರ್ತಿ ಪಟ್ಟ ಹಿಂಪಡೆದಿದ್ದರು.

ಇದೀಗ ಗಾಯದ ಕಾರಣ ಇಂಡಿಯಾನ ವೆಲ್ಸ್ ಹಾಗೂ ಮಿಯಾಮಿ ಓಪನ್ ಟೂರ್ನಿಯಿಂದ ದೂರ ಉಳಿದಿರುವ ಸೆರೆನಾ ಸ್ಥಾನವನ್ನು ಕೆರ್ಬರ್ ತಮ್ಮದಾಗಿಸಿಕೊಂಡಿದ್ದಾರೆ. ಕನಿಷ್ಠ 2 ವಾರದವರೆಗೂ ಜರ್ಮನಿ ಆಟಗಾರ್ತಿ ಮೊದಲ ಸ್ಥಾನದಲ್ಲಿ ಉಳಿಯುವುದು ಖಚಿತವಾಗಿದೆ.

ಇನ್ನು 377 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದ ಸ್ಟೆಫಿ ಗ್ರಾಫ್ ಹೆಸರಲ್ಲಿ ವಿಶ್ವ ದಾಖಲೆ ಇದೆ.

Follow Us:
Download App:
  • android
  • ios