ಕುವೈಟ್‌ನಲ್ಲಿ ನಡೆದ ಏಷ್ಯನ್‌ ಶಾಟ್‌ಗನ್‌ ಚಾಂಪಿಯನ್‌ಶಿಪ್‌ನ ಪುರುಷರ ಸ್ಕೀಟ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ದೀಪಾವಳಿ ಹಬ್ಬದ ದಿನ ಭಾರತ ಚಿನ್ನದ ಪದಕಕ್ಕೆ ಗುರಿಯಿಟ್ಟಿದೆ.

ಕುವೈಟ್‌(ನ.08): 8ನೇ ಏಷ್ಯನ್‌ ಶಾಟ್‌ಗನ್‌ ಚಾಂಪಿಯನ್‌ಶಿಪ್‌ನ ಪುರುಷರ ಸ್ಕೀಟ್‌ನಲ್ಲಿ ವಿಶ್ವ ದಾಖಲೆ ಅಂಕದೊಂದಿಗೆ ಚಿನ್ನ ಗೆದ್ದ ಅಂಗದ್‌ ವೀರ್‌ ಸಿಂಗ್‌ ಬಾಜ್ವಾ, ಖಂಡ ಅಥವಾ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ದಾಖಲೆ ಬರೆದಿದ್ದಾರೆ.

Scroll to load tweet…

;

ಫೈನಲ್‌ನ 60 ಶಾಟ್‌ಗಳಲ್ಲಿ 60ರಲ್ಲೂ ಗುರಿ ಮುಟ್ಟಿಅಂಗದ್‌ ಅಗ್ರಸ್ಥಾನ ಪಡೆದರು. ಚೀನಾ ಡಿ ಜಿನ್‌ 58 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, 46 ಅಂಕಗಳೊಂದಿಗೆ ಯುಎಇನ ಸಯೀದ್‌ ಕಂಚು ಜಯಿಸಿದರು. 

ಅರ್ಹತಾ ಸುತ್ತಿನಲ್ಲಿ 125ಕ್ಕೆ 121 ಅಂಕ ಗಳಿಸಿ ಅಂಗದ್‌ ಫೈನಲ್‌ ಪ್ರವೇಶಿಸಿದ್ದರು. ಅಂಗದ್‌ ಸಾಧನೆಯನ್ನು ಕೊಂಡಾಡಿರುವ ಭಾರತೀಯ ರೈಫಲ್‌ ಸಂಸ್ಥೆ ಅಧ್ಯಕ್ಷ ರಣ್‌ದೀರ್‌ ಸಿಂಗ್‌, ‘ಇದು ದೇಶಕ್ಕೆ ಸಿಕ್ಕಿರುವ ಅತಿದೊಡ್ಡ ದೀಪಾವಳಿ ಉಡುಗೊರೆ’ ಎಂದಿದ್ದಾರೆ.