Asianet Suvarna News Asianet Suvarna News

ವಿಂಬಲ್ಡನ್ : ಶುಭಾರಂಭ ಮಾಡಿದ ಮರ್ರೆ, ವೀನಸ್

ಪಂದ್ಯದ ಅರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ನಂ. ಶ್ರೇಯಾಂಕಿತ ಆಟಗಾರ ಮರ್ರೆ, ಖಜಕಸ್ತಾನದ ಆಟಗಾರನಿಗೆ ಯಾವ ಸಂದರ್ಭದಲ್ಲೂ ಪ್ರಭುತ್ವ ಮೆರೆಯಲು ಅವಕಾಶ ಮಾಡಿಕೊಡಲಿಲ್ಲ.

Andy Murray wins Wimbledon opener
  • Facebook
  • Twitter
  • Whatsapp

ಲಂಡನ್(ಜು.03): ಹಾಲಿ ಚಾಂಪಿಯನ್ ಬ್ರಿಟನ್‌'ನ ಆ್ಯಂಡಿ ಮರ್ರೆ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಟೆನಿಸ್ ಪಂದ್ಯಾವಳಿಯಲ್ಲಿ ಭರ್ಜರಿ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಖಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ 6-1, 6-4, 6-2 ನೇರ ಸೆಟ್‌'ಗಳಲ್ಲಿ ಗೆಲುವು ಸಾಧಿಸಿದರು.

ಪಂದ್ಯದ ಅರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ನಂ. ಶ್ರೇಯಾಂಕಿತ ಆಟಗಾರ ಮರ್ರೆ, ಖಜಕಸ್ತಾನದ ಆಟಗಾರನಿಗೆ ಯಾವ ಸಂದರ್ಭದಲ್ಲೂ ಪ್ರಭುತ್ವ ಮೆರೆಯಲು ಅವಕಾಶ ಮಾಡಿಕೊಡಲಿಲ್ಲ. ಇನ್ನು ದ್ವಿತೀಯ ಸುತ್ತಿನಲ್ಲಿ ಬ್ರಿಟನ್ ಆಟಗಾರ, ಜರ್ಮನಿಯ ಡಸ್ಟಿನ್ ಬ್ರೌನ್ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಆಟಗಾರ ಕೇ ನಿಶಿಕೋರಿ ಮೊದಲ ಸುತ್ತಿನಲ್ಲಿ ಇಟಲಿಯ ಮಾರ್ಕೊ ಚೆಚಿನಾಟೊ ವಿರುದ್ಧ 6-2, 6-2, 6-0 ನೇರ ಸೆಟ್‌'ಗಳಲ್ಲಿ ಜಯಗಳಿಸಿ 2ನೇ ಸುತ್ತಿಗೇರಿದರು.

ವೀನಸ್‌'ಗೆ ಜಯದೋಟ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 5 ಬಾರಿ ವಿಂಬಲ್ಡನ್ ಚಾಂಪಿಯನ್ ಅಮೆರಿಕದ ವೀಸನ್ ವಿಲಿಯಮ್ಸ್, ಮೊದಲ ಸುತ್ತಿನಲ್ಲಿ ಗೆಲುವು ಪಡೆಯುವಲ್ಲಿ ಸಫಲರಾಗಿದ್ದಾರೆ. 20ನೇ ಬಾರಿಗೆ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ವೀನಸ್, ಜರ್ಮನಿಯ ಎಲಿಸಿ ಮರ್ಟೆನ್ಸ್ ವಿರುದ್ಧ 7-6(9/7), 6-4 ನೇರ ಸೆಟ್‌'ಗಳಲ್ಲಿ ಜಯಗಳಿಸಿದರು.

ಇದೇ ವೇಳೆ ದ್ವಿತೀಯ ಶ್ರೇಯಾಂಕಿತೆ ರೊಮೇನಿಯಾದ ಸಿಮೊನಾ ಹಾಲೆಪ್ ಹಾಗೂ 4ನೇ ಶ್ರೇಯಾಂಕಿತೆ ಉಕ್ರೇನ್‌'ನ ಎಲೆನಾ ಸ್ವಿಟೊಲಿನಾ ಸಹ ದ್ವಿತೀಯ ಸುತ್ತಿಗೇರಿದ್ದಾರೆ.

Follow Us:
Download App:
  • android
  • ios