ಈಗಾಗಲೇ ಸ್ವಿಸ್ ಆಟಗಾರರಾದ ಸ್ಟಾನಿಸ್ಲಾಸ್ ವಾವ್ರಿಂಕಾ ಹಾಗೂ ಏಳು ಬಾರಿಯ ದುಬೈ ಓಪನ್ ವಿಜೇತ ರೋಜರ್ ಫೆಡರರ್ ಟೂರ್ನಿಯಲ್ಲಿ ಸೋಲನುಭವಿಸಿ ಹೊರಬಿದ್ದಿರುವುದರಿಂದ ಬ್ರಿಟನ್ ಆಟಗಾರನ ಚೊಚ್ಚಲ ದುಬೈ ಪ್ರಶಸ್ತಿ ಕನಸಿಗೆ ಹೆಚ್ಚಿನ ಬಲ ಬಂದಂತಾಗಿದೆ.

ದುಬೈ(ಮಾ.03): ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ತನ್ನೆಲ್ಲಾ ಅನುಭವವನ್ನೂ ಧಾರೆ ಎರೆದ, ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಜರ್ಮನಿಯ ಫಿಲಿಪ್ ಕೊಲ್‌ ಶ್ರೀಬರ್ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ದುಬೈ ಚಾಂಪಿಯನ್‌'ಶಿಪ್‌'ನಲ್ಲಿ ಸೆಮಿಫೈನಲ್ ತಲುಪಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌'ಫೈನಲ್‌ನಲ್ಲಿ ಫಿಲಿಪ್ ನೀಡಿದ ಕಠಿಣ ಪ್ರತಿರೋಧವನ್ನು ಮರ್ರೆ 6-7 (4/7), 7-6 (20/18), 6-1 ಸೆಟ್‌'ಗಳಿಂದ ಹತ್ತಿಕ್ಕಿದರು.

ಈಗಾಗಲೇ ಸ್ವಿಸ್ ಆಟಗಾರರಾದ ಸ್ಟಾನಿಸ್ಲಾಸ್ ವಾವ್ರಿಂಕಾ ಹಾಗೂ ಏಳು ಬಾರಿಯ ದುಬೈ ಓಪನ್ ವಿಜೇತ ರೋಜರ್ ಫೆಡರರ್ ಟೂರ್ನಿಯಲ್ಲಿ ಸೋಲನುಭವಿಸಿ ಹೊರಬಿದ್ದಿರುವುದರಿಂದ ಬ್ರಿಟನ್ ಆಟಗಾರನ ಚೊಚ್ಚಲ ದುಬೈ ಪ್ರಶಸ್ತಿ ಕನಸಿಗೆ ಹೆಚ್ಚಿನ ಬಲ ಬಂದಂತಾಗಿದೆ.