Asianet Suvarna News Asianet Suvarna News

ವಿಂಬಲ್ಡನ್ ಕದನ: ಮೂರನೇ ಸುತ್ತಿಗೆ ಲಗ್ಗೆಯಿಟ್ಟ ಮರ್ರೆ, ಜೋಕೋ, ನಡಾಲ್

ಶುಕ್ರವಾರ ನಡೆಯಲಿರುವ 3ನೇ ಸುತ್ತಿನಲ್ಲಿ ನಡಾಲ್ ರಷ್ಯಾದ ಕಚನೊವ್ ವಿರುದ್ಧ ಪ್ರೀ ಕ್ವಾರ್ಟರ್ ಸ್ಥಾನಕ್ಕಾಗಿ ಸೆಣಸಲಿದ್ದಾರೆ.

Andy Murray Rafael Nadal reach third round
  • Facebook
  • Twitter
  • Whatsapp

ಲಂಡನ್(ಜು.06): ಅಗ್ರಶ್ರೇಯಾಂಕಿತ ಟೆನಿಸ್ ತಾರೆಯರಾದ ಆ್ಯಂಡಿ ಮರ್ರೆ, ನೋವಾಕ್ ಜೋಕೋವಿಚ್ ಹಾಗೂ ರಾಫೆಲ್ ನಡಾಲ್ ನಿರೀಕ್ಷೆಯಂತೆಯೇ ಮೂರನೇ ಸುತ್ತು ಪ್ರವೇಶಿಸಿದ್ದಾರೆ

ಮೂರು ಬಾರಿ ಚಾಂಪಿಯನ್, ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೋವಾಕ್ ಜೋಕೋವಿಚ್ ಪುರುಷರ ಸಿಂಗಲ್ಸ್‌ನಲ್ಲಿ ಸುಲಭವಾಗಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನಲ್ಲಿ 22 ವರ್ಷದ ಜೆಕ್ ಗಣರಾಜ್ಯದ ಅ್ಯಡಂ ಪಾವ್ಲೆಸೆಕ್ ವಿರುದ್ಧ ಜೋಕೋವಿಚ್ 6-2, 6-2, 6-1 ನೇರ ಸೆಟ್‌'ಗಳಲ್ಲಿ ಗೆಲುವು ಸಾಧಿಸಿದರು.

ಹಾಲಿ ಚಾಂಪಿಯನ್, ವಿಶ್ವ ನಂ.1 ಆಟಗಾರ ಆ್ಯಂಡಿ ಮರ್ರೆ 3ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಟಗಾರ ಜರ್ಮನಿಯ ಡಸ್ಟಿನ್ ಬ್ರೌನ್ ವಿರುದ್ಧ 6-3, 6-2, 6-2 ಸೆಟ್‌'ಗಳ ಸುಲಭ ಗೆಲುವು ದಾಖಲಿಸಿದರು.

ಇದೇ ವೇಳೆ ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ರಾಫೆಲ್ ನಡಾಲ್ ಅಮೆರಿಕದ ಡೊನಾಲ್ಡ್ ಯಂಗ್ ವಿರುದ್ಧ 6-4, 6-2, 7-5 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿ 3ನೇ ಸುತ್ತಿಗೆ ಪ್ರವೇಶ ಪಡೆದರು.

ಶುಕ್ರವಾರ ನಡೆಯಲಿರುವ 3ನೇ ಸುತ್ತಿನಲ್ಲಿ ನಡಾಲ್ ರಷ್ಯಾದ ಕಚನೊವ್ ವಿರುದ್ಧ ಪ್ರೀ ಕ್ವಾರ್ಟರ್ ಸ್ಥಾನಕ್ಕಾಗಿ ಸೆಣಸಲಿದ್ದಾರೆ.

Follow Us:
Download App:
  • android
  • ios