Asianet Suvarna News Asianet Suvarna News

ಮರ್ರೆಗೆ ಒಲಿದ ಚೊಚ್ಚಲ ದುಬೈ ಕಿರೀಟ

ಈ ಋುತುವಿನಲ್ಲಿ ಅವರು ಮೊದಲ ಪ್ರಶಸ್ತಿ ಜಯಿಸಿದರಲ್ಲದೆ, ಒಟ್ಟಾರೆ ವೃತ್ತಿಬದುಕಿನ 45ನೇ ಟ್ರೋಫಿಗೆ ಮುತ್ತಿಕ್ಕಿದರು.

Andy Murray downs Fernando Verdasco to win first tournament of the year in Dubai

ದುಬೈ(ಮಾ.05): ವಿಶ್ವದ ನಂ.1 ಟೆನಿಸಿಗ, ಬ್ರಿಟನ್‌'ನ ಆ್ಯಂಡಿ ಮರ್ರೆ ಮೊಟ್ಟಮೊದಲ ಬಾರಿಗೆ ದುಬೈ ಓಪನ್‌'ನಲ್ಲಿ ಚಾಂಪಿಯನ್‌ ಆಗಿದ್ದಾರೆ. 
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಅವರು ಸ್ಪೇನ್‌ ಆಟಗಾರ ಫೆರ್ನಾಂಡೊ ವಾರ್ಡೆಸ್ಕೊ ಎದುರು 6-3, 6-2 ಎರಡು ನೇರ ಸೆಟ್‌'ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಈ ಋುತುವಿನಲ್ಲಿ ಅವರು ಮೊದಲ ಪ್ರಶಸ್ತಿ ಜಯಿಸಿದರಲ್ಲದೆ, ಒಟ್ಟಾರೆ ವೃತ್ತಿಬದುಕಿನ 45ನೇ ಟ್ರೋಫಿಗೆ ಮುತ್ತಿಕ್ಕಿದರು.
ಅಂದಹಾಗೆ ವಾರ್ಡೆಸ್ಕೊ ಎದುರು 12-1ರ ಗೆಲುವಿನ ದಾಖಲೆ ಬರೆದಿರುವ ಮರ್ರೆ, ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿಧಾನಗತಿ ಆಟದಿಂದ ಅಚ್ಚರಿ ಮೂಡಿಸಿದರು. ಆದರೆ, ಕ್ರಮೇಣ ಆಟದಲ್ಲಿ ಹಿಡಿತ ಸಾಧಿಸಿದ ಅವರು 3-3 ಮುನ್ನಡೆ ಪಡೆದು, ಇದೇ ಹಾದಿಯಲ್ಲಿ ಮೊದಲ ಸೆಟ್‌ ಗೆದ್ದರೆ, ಎರಡನೇ ಸೆಟ್‌'ನಲ್ಲಿ ಸುಲಭ ಗೆಲುವು ದಾಖಲಿಸಿದರು.

Follow Us:
Download App:
  • android
  • ios