3 ವರ್ಷಗಳ ಬಳಿಕ ವೆಸ್ಟ್ಇಂಡೀಸ್ ಪಡೆ ಕೂಡಿಕೊಂಡ ಕೆಕೆಆರ್ ಸ್ಟಾರ್ ಆಲ್ರೌಂಡರ್

First Published 17, Jul 2018, 3:53 PM IST
Andre Russell returns to WI ODI squad for Bangladesh series
Highlights

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಇದೀಗ ವೆಸ್ಟ್ಇಂಡೀಸ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ನಿಷೇಧದ ಬಳಿಕ ವಿಂಡೀಸ್ ತಂಡ ಸೇರಿಕೊಂಡ ಆ ಕ್ರಿಕೆಟಿಗ ಯಾರು? ನಿಷೇಧಕ್ಕೊಳಗಾಗಿದ್ದು ಯಾಕೆ? ಇಲ್ಲಿದೆ ವಿವರ

ವೆಸ್ಟ್ಇಂಡೀಸ್(ಜು.17): ಡೋಪ್ ಟೆಸ್ಟ್‌ನಿಂದ ನಿಷೇಧಕ್ಕೊಳಗಾಗಿದ್ದ ವೆಸ್ಟ್ಇಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಬರೋಬ್ಬರಿ 3 ವರ್ಷಗಳ ಬಳಿಕ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಆ್ಯಂಡ್ರೆ ರಸೆಲ್‌ಗೆ ಸ್ಥಾನ ಕಲ್ಪಿಸಲಾಗಿದೆ.

2015ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯ ಆಡಿದ್ದ ರಸೆಲ್ ಇಂಜುರಿಗೆ ತುತ್ತಾಗಿದ್ದರು. ಬಳಿಕ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ರಸೆಲ್ ಡೋಪ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದರು. ಹೀಗಾಗಿ 2017 -2018ರಲ್ಲಿ ನಿಷೇಧಕ್ಕೊಳಾಗಿದ್ದರು. 

2019ರ ವಿಶ್ವಕಪ್ ದೃಷ್ಟಿಯಿಂದ ರಸೆಲ್ ವಿಂಡೀಸ್ ತಂಡ ಸೇರಿಕೊಂಡಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಜುಲೈ 22 ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ದಧ ಸರಣಿಗೆ ವೆಸ್ಟ್ಇಂಡೀಸ್ ತಂಡ ಪ್ರಕಟಿಸಿದೆ. ನಿಷೇಧದ ಶಿಕ್ಷೆ ಮುಗಿಸಿರುವ ರಸೆಲ್‌ಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಅವಕಾಶ ಕಲ್ಪಿಸಿದೆ. ಆದರೆ ಮರ್ಲಾನ್ ಸ್ಯಾಮ್ಯುಯೆಲ್ಸ್ ಹಾಗೂ ಕಾರ್ಲೋಸ್ ಬ್ರಾಥ್ವೈಟ್‌ಗೆ ಕೊಕ್ ನೀಡಲಾಗಿದೆ.

ವೆಸ್ಟ್ಇಂಡೀಸ್ ತಂಡ:
ಜೇಸನ್ ಹೋಲ್ಡರ್(ನಾಯಕ),ದೇವೇಂದ್ರ ಬಿಶೂ, ಕ್ರಿಸ್ ಗೇಲ್, ಶಿಮ್ರೋನ್ ಹೆಟ್ಮೆಯರ್, ಶಯಿ ಹೋಪ್, ಅಲ್ಜಾರಿ ಜೊಸೆಫ್, ಇವಿನ್ ಲಿವಿಸ್, ಜಾಸನ್ ಮೊಹಮ್ಮದ್, ಆಶ್ಲೆ ನರ್ಸ್, ಕಿಮೋ ಪೌಲ್, ಕೀರನ್ ಪೊವೆಲ್, ರೊವ್ಮಾನ್ ಪೊವೆಲ್, ಆ್ಯಂಡ್ರೆ ರಸೆಲ್ 

loader