ಒಂದು ಹಂತದಲ್ಲಿ 10 ಓವರ್'ಗೆ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಿದ್ದ ಕೋಲ್ಕತ್ತಗೆ ರಸೆಲ್ ಆಸರೆಯಾದರು. ಚೆನ್ನೈ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ರಸೆಲ್ ಕೇವಲ ಕೇವಲ 36 ಎಸೆತಗಳಲ್ಲಿ 11 ಮನಮೋಹಕ ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನೊಂದಿಗೆ 88 ರನ್ ಸಿಡಿಸಿದರು. ಈ ಮೂಲಕ ತಂಡದ ಮೊತ್ತವನ್ನು 200ರ ಗಡಿಯನ್ನೂ ದಾಟಿಸಿದರು.

ಚೆನ್ನೈ(ಏ.10): ಕೇವಲ 36 ಎಸೆತಗಳಲ್ಲಿ 11 ಸಿಕ್ಸರ್ ಒಂದು ಬೌಂಡರಿ ಒಟ್ಟು 88 ರನ್. ಇದು ಚೆನ್ನೈನ ಚೇಪಾಕ್ ಮೈದಾನದಲ್ಲಿ ಆಂಡ್ರೆ ರಸೆಲ್ ಸಿಡಿಸಿದ ರನ್ ಹೊಳೆ. ಚೆನ್ನೈನ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ರಸೆಲ್ ಚೆನ್ನೈ ಗೆಲ್ಲಲು 203 ರನ್'ಗಳ ಕಠಿಣ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿರೀಕ್ಷೆಯಂತೆಯೇ ಸ್ಪೋಟಕ ಆರಂಭವನ್ನೇ ಪಡೆಯಿತು. ಕೇವಲ 4 ಎಸೆತ ಎದುರಿಸಿದ ನರೈನ್ 2 ಸಿಕ್ಸರ್ ಸಿಡಿಸಿ ಪೆವಿಲಿಯನ್ ಸೇರಿದರು. ಲಿನ್(22) ಉತ್ತಪ್ಪ(29) ಹಾಗೂ ಕಾರ್ತಿಕ್(26) ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ಅಬ್ಬರಿಸಿದ ರಸೆಲ್: ಒಂದು ಹಂತದಲ್ಲಿ 10 ಓವರ್'ಗೆ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಿದ್ದ ಕೋಲ್ಕತ್ತಗೆ ರಸೆಲ್ ಆಸರೆಯಾದರು. ಚೆನ್ನೈ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ರಸೆಲ್ ಕೇವಲ ಕೇವಲ 36 ಎಸೆತಗಳಲ್ಲಿ 11 ಮನಮೋಹಕ ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನೊಂದಿಗೆ 88 ರನ್ ಸಿಡಿಸಿದರು. ಈ ಮೂಲಕ ತಂಡದ ಮೊತ್ತವನ್ನು 200ರ ಗಡಿಯನ್ನೂ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್:

KKR:202/6

ರಸೆಲ್: 88*

ವಾಟ್ಸನ್: 39/2