ಕೋಲ್ಕತಾ[ನ.04]: ಟೆಸ್ಟ್‌ ಮತ್ತು ಏಕದಿನ ಸರಣಿಯಲ್ಲಿ ಸೋಲನುಭವಿಸಿರುವ ವಿಂಡೀಸ್‌ ತಂಡಕ್ಕೆ ಟಿ20 ಸರಣಿ ಆರಂಭಕ್ಕೂ ಮುನ್ನವೆ ಹಿನ್ನಡೆಯಾಗಿದೆ.

ಇದನ್ನು ಓದಿ: 3 ವರ್ಷಗಳ ಬಳಿಕ ವೆಸ್ಟ್ಇಂಡೀಸ್ ಪಡೆ ಕೂಡಿಕೊಂಡ ಕೆಕೆಆರ್ ಸ್ಟಾರ್ ಆಲ್ರೌಂಡರ್

ಮೊಣಕಾಲು ನೋವಿಗೆ ತುತ್ತಾಗಿರುವ ವಿಂಡೀಸ್‌  ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌, ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ರಸೆಲ್‌, ಏಕದಿನ ಪಂದ್ಯಾವಳಿಗೂ ಆಯ್ಕೆಯಾಗಿರಲಿಲ್ಲ. ಆದರೆ ಟಿ20 ಸರಣಿಗೆ ಅವರನ್ನು ಸೇರಿಸಿಕೊಳ್ಳಲಾಗಿತ್ತು. 

ಇದನ್ನು ಓದಿ: ವಿಂಡೀಸ್ ವಿರುದ್ಧದ ಟಿ20 ಪಂದ್ಯಕ್ಕೆ 12 ಸದಸ್ಯರ ಭಾರತ ತಂಡ ಪ್ರಕಟ!

ಆಫ್ಘಾನಿಸ್ತಾನ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಂಡಿದ್ದ ರಸೆಲ್‌, ಮೊಣಕಾಲು ನೋವು ಕಾಣಿಸಿಕೊಂಡಿದ್ದರಿಂದ ದುಬೈನಿಂದ ತವರಿಗೆ ಮರಳಿದ್ದಾರೆ. ಈಗಾಗಲೇ ಕ್ರಿಸ್ ಗೇಲ್, ಸುನಿಲ್ ನರೈನ್, ಎವಿನ್ ಲೆವಿಸ್ ಅವರಂತಹ ಸ್ಟಾರ್ ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಇದೀಗ ರಸೆಲ್ ಕೂಡಾ ಅಲಭ್ಯವಾಗಿರುವುದು ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ. ಕಾರ್ಲೋಸ್ ಬ್ರಾಥ್’ವೈಟ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಇಂದು ಟೀಂ ಇಂಡಿಯಾವನ್ನು ಎದುರಿಸಲಿದೆ.