ಆಂಡ್ರೆ ರಸೆಲ್ ಸಿಡಿಸಿದ 104 ಮೀಟರ್ ಸಿಕ್ಸರ್‌ಗೆ ಬಾಂಗ್ಲಾದೇಶ ಸ್ಥಬ್ಧ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 23, Jul 2018, 6:34 PM IST
Andre Russell hammers a 104 meter six against Bangladesh
Highlights

ವೆಸ್ಟ್ಇಂಡೀಸ್ ಆಲ್‌ರೌಂಡರ್ ಆಂಡ್ರೆ ರೆಸೆಲ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದು ಐಪಿಎಲ್ ಅಭಿಮಾನಿಗಳಿಗೆ ಚೆನ್ನಾಗಿ ತತಿಳಿದಿದೆ. ಇದೀಗ ನಿಷೇಧದ ಬಳಿಕ ವೆಸ್ಟ್ಇಂಡೀಸ್ ತಂಡ ಸೇರಿಕೊಂಡಿರುವ ರೆಸಲ್ ಭರ್ಜರಿ ಸಿಕ್ಸರ್ ಸಿಡಿಸಿ ಬಾಂಗ್ಲಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಗಯಾನ(ಜು.23): ನಿಷೇಧ ಶಿಕ್ಷೆ ಮುಗಿಸಿ ಮತ್ತೆ ವೆಸ್ಟ್ಇಂಡೀಸ್ ತಂಡ ಸೇರಿಕೊಂಡಿರುವ ಆಲ್‌ರೌಂಡರ್ ಆಂಡ್ರೆ ರಸೆಲ್ ಭರ್ಜರಿ ಸಿಕ್ಸರ್ ಮೂಲಕ ಅಬ್ಬರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೆಸಲ್ 104 ಮೀಟರ್ ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ.

ರಸೆಲ್ ಭರ್ಜರಿ ಸಿಕ್ಸರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸೆಲ್ ಹೊಡೆತಕ್ಕೆ ಚೆಂಡು ಕ್ರೀಡಾಂಗಣದಿಂದ ಹೊರಗೆ ಬಿದ್ದಿದೆ.  ಬರೋಬ್ಬರಿ 104 ಮೀಟರ್ ಸಿಕ್ಸರ್ ಸಿಡಿಸೋ ಮೂಲಕ ರಸೆಲ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.

 

 

ಈ ಪಂದ್ಯದಲ್ಲಿ ರಸೆಲ್ 13 ರನ್ ಸಿಡಿಸಿ ಔಟಾಗಿದ್ದಾರೆ. ಇಷ್ಟೇ ಅಲ್ಲ ಬಾಂಗ್ಲಾದೇಶ ನೀಡಿದ 280 ರನ್ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ಇಂಡೀಸ್ 231ರನ್ ಸಿಡಿಸಿ ಸೋಲೊಪ್ಪಿಕೊಂಡಿದೆ. ರಸೆಲ್ ಭರ್ಜರಿ ಸಿಕ್ಸರ್ ಸಿಡಿಸಿದರೂ ತಂಡ ಮಾತ್ರ ಗೆಲ್ಲಲಿಲ್ಲ.

 ಇದನ್ನು ಓದಿ: ಕ್ರಿಕೆಟ್ ಸೀಕ್ರೆಟ್ಸ್: ಕ್ರಿಕೆಟ್ ಇತಿಹಾಸದಲ್ಲಿ ಜುಲೈ 23ರ ವಿಶೇಷತೆ ಏನು?

loader