ಕಳೆದ ಜೂನ್'ನಲ್ಲಿ ಇಂಡೋನೇಷ್ಯಾ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ವಿಜಯವಾಡದಲ್ಲಿ ಶ್ರೀಕಾಂತ್'ರನ್ನು ಸನ್ಮಾನಿಸಿದ ನಾಯ್ಡು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು. ಅದರಂತೆ 2017ರ ನವೆಂಬರ್'ನಲ್ಲಿ ನಾಯ್ಡು ನೇತೃತ್ವದ ಸಚಿವ ಸಂಪುಟ ಶ್ರೀಕಾಂತ್'ಗೆ ಗ್ರೂಪ್-1 ಹಂತದ ಹುದ್ದೆ ನೀಡುವ ಬಗ್ಗೆ ಅನುಮೋದನೆ ನೀಡಲಾಗಿತ್ತು.
ಅಮರಾವತಿ(ಮಾ.29): ದೇಶದ ಅನುಭವಿ ಬ್ಯಾಡ್ಮಿಂಟನ್ ಪಟು ಕೀಡಂಬಿ ಶ್ರೀಕಾಂತ್ ಅವರನ್ನು ಆಂಧ್ರಪ್ರದೇಶ ಸರ್ಕಾರ ಜಿಲ್ಲಾಧಿಕಾರಿ(ಡಿಸಿ)ಯಾಗಿ ನೇಮಕ ಮಾಡಿದೆ.
ಬ್ಯಾಡ್ಮಿಂಟನ್ ಕೋಚ್ ಫುಲ್ಲೇಲಾ ಗೋಪಿಚೆಂದ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇಮಕಾತಿ ಪತ್ರವನ್ನು ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ದೇಶದ ನಾಲ್ಕನೇ ಗೌರವಾನ್ವಿತ ಪ್ರಶಸ್ತಿಯಾದ 'ಪ್ರದ್ಮಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದ ಆಲ್ ಇಂಗ್ಲೆಂಡ್ ಚಾಂಪಿಯನ್ ಶ್ರೀಕಾಂತ್ ಸಾಧನೆಯನ್ನು ನಾಯ್ಡು ಇದೇ ವೇಳೆ ಸ್ಮರಿಸಿದರು.
ಕಳೆದ ಜೂನ್'ನಲ್ಲಿ ಇಂಡೋನೇಷ್ಯಾ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ವಿಜಯವಾಡದಲ್ಲಿ ಶ್ರೀಕಾಂತ್'ರನ್ನು ಸನ್ಮಾನಿಸಿದ ನಾಯ್ಡು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು. ಅದರಂತೆ 2017ರ ನವೆಂಬರ್'ನಲ್ಲಿ ನಾಯ್ಡು ನೇತೃತ್ವದ ಸಚಿವ ಸಂಪುಟ ಶ್ರೀಕಾಂತ್'ಗೆ ಗ್ರೂಪ್-1 ಹಂತದ ಹುದ್ದೆ ನೀಡುವ ಬಗ್ಗೆ ಅನುಮೋದನೆ ನೀಡಲಾಗಿತ್ತು.
ರಿಯೊ ಒಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ ಸಿಂಧು ಬಳಿಕ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ 2ನೇ ಅತಿಕಿರಿಯ ಕ್ರೀಡಾಪಟು ಎಂಬ ಗೌರವಕ್ಕೆ ಶ್ರೀಕಾಂತ್ ಪಾತ್ರರಾಗಿದ್ದರು.