ಆಲ್ರೌಂಡರ್'ಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಜಡೇಜಾ ಹಾಗೂ ಅಶ್ವಿನ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಕಾಯುಕೊಂಡಿದ್ದಾರೆ.
ದುಬೈ(ಸೆ.11): ಭಾರತದ ಅನುಭವಿ ಕ್ರಿಕೆಟಿಗ ರವೀಂದ್ರ ಜಡೇಜಾ ಐಸಿಸಿ ಟೆಸ್ಟ್ ಬೌಲರ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.
ವೆಸ್ಟ್'ಇಂಡಿಸ್ ವಿರುದ್ಧ ಮೂರನೇ ಟೆಸ್ಟ್'ನಲ್ಲಿ ಅಮೋಘ ಪ್ರದರ್ಶನ ತೋರುವುದರೊಂದಿಗೆ 500 ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್'ನ ಜೇಮ್ಸ್ ಆ್ಯಂಡರ್'ಸನ್ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಆರ್. ಅಶ್ವಿನ್ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಬ್ಯಾಟ್ಸ್'ಮನ್'ಗಳ ಪಟ್ಟಿಯಲ್ಲಿ ಪೂಜಾರ 4, ಕೊಹ್ಲಿ 6, ಕೆ.ಎಲ್ ರಾಹುಲ್ 9 ಹಾಗೂ ಅಜಿಂಕ್ಯ ರಹಾನೆ 10ನೇ ಸ್ಥಾನದಲ್ಲಿದಾರೆ.
ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ಜೋ ರೂಟ್ ಹಾಗೂ ಕೇನ್ ವಿಲಿಯಮ್ಸನ್ ಟಾಪ್ 3 ಪಟ್ಟಿಯಲ್ಲಿದ್ದಾರೆ. ಆಲ್ರೌಂಡರ್'ಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಜಡೇಜಾ ಹಾಗೂ ಅಶ್ವಿನ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಕಾಯುಕೊಂಡಿದ್ದಾರೆ.
