ಚೆಸ್ ವಿಶ್ವಕಪ್‌ನಲ್ಲಿ ಪ್ರಜ್ಞಾನಂದನ ಸಾಧನೆ ಮೆಚ್ಚಿದ ಆನಂದ್ ಮಹೀಂದ್ರಾ
ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಪ್ರಜ್ಞಾನಂದ 2ನೇ ಸ್ಥಾನ ಗಳಿಸಿದ ಬಳಿಕ ಮಹೀಂದ್ರಾ ಆಂಡ್ ಮಹೀಂದ್ರಾ ಚೇರ್ಮನ್ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಅವರ ಕುರಿತಾಗಿ ಪ್ರೋತ್ಸಾಹದ ಮಾತುಗಳನ್ನು ಬರೆದಿದ್ದಾರೆ.
ನವದೆಹಲಿ (ಆ.25): ಭಾರತದ ರಮೇಶ್‌ಬಾಬು ಪ್ರಜ್ಞಾನಂದ ಬಾಕುವಿನಲ್ಲಿ ನಡೆದ 2023ರ ಫಿಡೆ ಚೆಸ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇದರ ಬೆನ್ನಲ್ಲಿಯೇ 18 ವರ್ಷದ ಪ್ರಜ್ಞಾನಂದನ ಸಾಧನೆಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ. ಪ್ರಜ್ಞಾನಂದನ ಶ್ರೇಷ್ಠ ನಿರ್ವಹಣೆಗೆ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಮಾತುಗಳನ್ನು ಬರೆದಿದ್ದಾರೆ. ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಜ್ಞಾನಣದ ತೋರಿದ ಅಪೂರ್ವ ಕೌಶಲಗಳ ನಿರ್ವಹಣೆ ಹಾಗೂ ಏಕಾಗ್ರತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಪ್ರಜ್ಞಾನಂದ ನೀನು ರನ್ನರ್‌ಅಪ್. ಇದು ಮುಂದಿನ ಚಿನ್ನ ಹಾಗೂ ನಿನ್ನನ್ನು ಶ್ರೇಷ್ಠ ಆಟಗಾರನನ್ನಾಗಿ ಮಾಡುವ 'ರನ್‌ಅಪ್'. ಇನ್ನೊಂದು ದಿನ ಬದುಕಿನ ಹೋರಾಟ ಮಾಡಬೇಕಾದಲ್ಲಿ, ಸಾಕಷ್ಟು ಯುದ್ಧಗಳನ್ನು ನೀವು ಕಲಿಯಬೇಕಾಗುತ್ತದೆ. ನೀವು ಕಲಿತಾಗಲೇ, ಮತ್ತೊಂದು ಹೋರಾಟ ಮಾಡಲು ಸಾಧ್ಯ. ಇದರಿಂದಾಗಿಯೇ ನಾವು ಮತ್ತೆ ಅಲ್ಲಿಗೆ ಬರುತ್ತೇವೆ ಹಾಗೂ ನಿಮ್ಮನ್ನು ಜೋರಾಗಿ ಹುರಿದುಂಬಿಸುತ್ತದೆ' ಎಂದು ಆನಂದ್ ಮಹೀಂದ್ರಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ಅಂತಾರಾಷ್ಟ್ರೀಯ ಚೆಸ್ ಫಡರೇಷನ್ ಹಂಚಿಕೊಂಡಿರುವ ಪೋಸ್ಟ್‌ಅನ್ನು ಇವರು ಹಂಚಿಕೊಂಡಿದ್ದಾರೆ.
ಆಗಸ್ಟ್ 24 ರಂದು ಆನಂದ್ ಮಹೀಂದ್ರಾ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನು ಪೋಸ್ಟ್ ಮಾಡಿದ ಬಳಿಕ ಈವರೆಗೂ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 20 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ಪ್ರಜ್ಞಾನಂದ ಅವರ ಸಾಧನೆಯ ಬಗ್ಗೆ ಎಷ್ಟು ಸಂತೋಷ ಮತ್ತು ಹೆಮ್ಮೆಯಿದೆ ಎನ್ನುವ ಬಗ್ಗೆ ಹಲವರು ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅವಿಸ್ಮರಣೀಯ ಸಾಧನೆ ಪ್ರಜ್ಞಾನಂದ. ಕೇವಲ 18 ನೇ ವಯಸ್ಸಿನಲ್ಲಿ, ನೀವು ನಿಮ್ಮ ಕೌಶಲ ಮತ್ತು ದೃಢತೆಯ ಮಟ್ಟವನ್ನು ವಿಸ್ಮಯಕಾರಿಯಾಗಿ ಪ್ರದರ್ಶನ ಮಾಡಿದ್ದೀರಿ. ವಿಶ್ವದ ಅತ್ಯುತ್ತಮ ಸ್ಪರ್ಧಿಯ ವಿರುದ್ಧ ನೀವು ತೋರಿದ ಪ್ರದರ್ಶನ ನಿಮ್ಮ ಅಪಾರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇದೇ ಆಟವನ್ನು ಮುಂದುವರಿಸುತ್ತಲೇ ಇರಿ. ಭವಿಷ್ಯ ಖಂಡಿತಾ ನಿಮ್ಮದಾಗಿರುತ್ತದೆ. ಪ್ರಜ್ಞಾನಂದನನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಆನಂದ್ ಮಹೀಂದ್ರಾ ಅವರಿಗೂ ಅಭಿನಂದನೆಗಳು ಎಂದು ಒಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ಅತ್ಯಂತ ಬುದ್ಧಿವಂತ ಆಟಗಾರನಾಗಿದ್ದಾರೆ. ಭವಿಷ್ಯದ ದಿನಗಳಲ್ಲಿ ನಿಮಗೆ ಯಶಸ್ಸು ಸಿಗಲಿ ಪ್ರಜ್ಞಾನಂದ ಎಂದು ಹಾರೈಸುತ್ತೇನೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಪ್ರಜ್ಞಾನಂದ ನೀವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನೀವು ಎಷ್ಟು ಬಾರಿ ಬಿದ್ದರೂ, ನೀವು ಯಾವಾಗಲೂ ಹಿಂತಿರುಗಬಹುದು ಮತ್ತು ಹೋರಾಡಬಹುದು ಎಂದು ನೀವು ನಮಗೆ ತೋರಿಸಿದ್ದೀರಿ. ನಿಮ್ಮನ್ನು ಹುರಿದುಂಬಿಸಲು ಮತ್ತು ನಿಮ್ಮ ಪ್ರಯಾಣದಲ್ಲಿ ನಿಮ್ಮನ್ನು ಬೆಂಬಲಿಸಲು ನಾವೆಲ್ಲರೂ ಇಲ್ಲಿದ್ದೇವೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
CHESS WORLD CUP 2023: ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಜ್ಞಾನಂದ ಗೆದ್ದ ನಗದು ಬಹುಮಾನವೆಷ್ಟು ಗೊತ್ತಾ?
"ಹ್ಯಾಟ್ಸ್ ಆಫ್, ಪ್ರಜ್ಞಾನಂದ! ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಎರಡನೇ ಸ್ಥಾನವನ್ನು ಗೆಲ್ಲುವುದು ಕೇವಲ ಪ್ರಾರಂಭವಾಗಿದೆ. ನಿಮ್ಮ ವಿನಮ್ರ ವರ್ತನೆ ಮತ್ತು ಅದ್ಭುತ ಕೌಶಲ್ಯಗಳು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಚದುರಂಗದ ಬೋರ್ಡ್‌ನಲ್ಲಿ ನಿಮ್ಮ ಆಟ ಹೀಗೇ ಮುಂದುವರಿಯಲಿ ಎಂದು ಇನ್ನೊಬ್ಬರು ಹಾರೈಸಿದ್ದಾರೆ.
Chess World Cup 2023: ಪ್ರಜ್ಞಾನಂದ ಕೈ ತಪ್ಪಿದ ಚೆಸ್ ವಿಶ್ವಕಪ್ ಕಿರೀಟ..!