ಮಾಸ್ಕೊ(ಅ.05): ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಹತ್ತನೇ ತಾಲ್‌ ಸ್ಮಾರಕ ಚೆಸ್‌ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ರಷ್ಯಾ ಆಟಗಾರ ಪೀಟರ್‌ ಸ್ವಿಡ್ಲರ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟರು.

ಇದರಿಂದ 20,0000 ಡಾಲರ್‌ ಬಹುಮಾನ ಮೊತ್ತದ ಟೂರ್ನಿಯಲ್ಲಿ ವಿಶ್ವನಾಥನ್‌ 4 ಅಂಕಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲೇ ಉಳಿಯುವಂತಾಯಿತು.

ಆದರೆ, ಏಳನೇ ಸುತ್ತಿನ ಪಂದ್ಯದಲ್ಲಿ ಚೀನಾದ ಲಿ ಚಾವೊ ವಿರುದ್ಧ ಡ್ರಾ ಸಾಧಿಸಿದ ರಷ್ಯಾದ ಇಯಾನ್‌ ನೆಪೊನಿಯಾಚ್ಟಿ(5) ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ವ್ಲಾಡಿಮಿರ್‌ ಕ್ರಾಮ್ನಿಕ್‌ ವಿರುದ್ಧ ಡ್ರಾ ಸಾಧಿಸಿದ ಹಾಲೆಂಡ್‌ನ ಅನೀಶ್‌ ಗಿರಿ ಕೇವಲ 0.5 ಪಾಯಿಂಟ್‌ ಮುನ್ನಡೆಯೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ.