ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೂರು ಪಂದ್ಯಗಳು ಜ. 26, 29 ಮತ್ತು ಫೆ. 1ರಂದು ನಡೆಯಲಿವೆ.

ಬೆಂಗಳೂರು(ಜ. 23): ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು ಜೈಸಿದ ಬಳಿಕ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಕಾಶ್ಮೀರ ಪ್ರತಿಭೆ ಪರ್ವೆಜ್ ರಸೂಲ್ ಹಾಗೂ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಅವರಿಗೆ ಅವಕಾಶ ನೀಡಲಾಗಿದೆ. ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಿದ್ದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ಕೊಡಲಾಗಿದೆ. ಕರ್ನಾಟಕದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆಯವರು ಈ ತಂಡದಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೂರು ಪಂದ್ಯಗಳು ಜ. 26, 29 ಮತ್ತು ಫೆ. 1ರಂದು ನಡೆಯಲಿವೆ.

ಭಾರತ ಟಿ20 ತಂಡ:
ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ, ಮನೀಶ್ ಪಾಂಡೆ, ರಿಶಭ್ ಪಂತ್, ಕೆಎಲ್ ರಾಹುಲ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್, ಪರ್ವೇಜ್ ರಸೂಲ್, ಅಮಿತ್ ಮಿಶ್ರಾ, ಯುಜವೇಂದ್ರ ಚಾಹಾಲ್, ಜಸ್'ಪ್ರೀತ್ ಬುಮ್ರಾ, ಆಶೀಶ್ ನೆಹ್ರಾ, ಭುವನೇಶ್ವರ್ ಕುಮಾರ್, ಮಂದೀಪ್ ಸಿಂಗ್,