2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಹರಾಜಿಗೆ ಕ್ಷಣಗಣನೆಹರಾಜಿನಲ್ಲಿ 500ಕ್ಕೂ ಅಧಿಕ ಕಬಡ್ಡಿಪಟುಗಳು ಭಾಗಿಪ್ರತೀ ತಂಡಕ್ಕೆ 4.4 ಕೋಟಿ ರು. ಖರ್ಚು ಮಾಡಲು ಅವಕಾಶ

ಮುಂಬೈ(ಆ.05): 9ನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಹಾಗೂ ಭಾನುವಾರ ಮುಂಬೈನಲ್ಲಿ ನಡೆಯಲಿದ್ದು, ಹಲವು ತಾರಾ ಆಟಗಾರರು ಬಂಪರ್‌ ಹೊಡೆಯುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಉಳಿದ 500ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ತಾರಾ ಆಟಗಾರರಾದ ಪವನ್‌ ಶೆರಾವತ್‌, ಪ್ರದೀಪ್‌ ನರ್ವಾಲ್‌, ಸಿದ್ಧಾರ್ಥ್ ದೇಸಾಯಿ, ಅಭಿಷೇಕ್‌ ಸಿಂಗ್‌ ಸೇರಿ ಇನ್ನೂ ಹಲವರು ಆಯ್ಕೆಗೆ ಲಭ್ಯವಿದ್ದು, 45 ವಿದೇಶಿ ಆಟಗಾರರೂ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರತೀ ತಂಡಕ್ಕೆ 4.4 ಕೋಟಿ ರು. ಖರ್ಚು ಮಾಡಲು ಅವಕಾಶವಿದೆ. ಹರಾಜಿನಲ್ಲಿರುವ ಆಟಗಾರರನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ‘ಎ’ ವಿಭಾಗದ ಆಟಗಾರರು 30 ಲಕ್ಷ ರು. ಮೂಲಬೆಲೆ ಹೊಂದಿದ್ದಾರೆ. ‘ಬಿ’, ‘ಸಿ’ ಹಾಗೂ ‘ಡಿ’ ಗುಂಪಿನ ಆಟಗಾರರು ಕ್ರಮವಾಗಿ 20, 10 ಹಾಗೂ 6 ಲಕ್ಷ ರು. ಮೂಲಬೆಲೆ ಪಡೆಯಲಿದ್ದಾರೆ. ಕಳೆದ ಆವೃತ್ತಿಯ ಹರಾಜಿನಲ್ಲಿ 1.65 ಕೋಟಿ ರುಪಾಯಿಗೆ ಯು.ಪಿ.ಯೋಧಾ ಪಾಲಾಗಿದ್ದ ಪ್ರದೀಪ್‌ ನರ್ವಾಲ್‌ ಪ್ರೊ ಕಬಡ್ಡಿಯ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.

ಬೆಂಗಾಲ್ ವಾರಿಯರ್ಸ್‌, ಯು.ಪಿ. ಯೋಧಾ, ಯು ಮುಂಬಾ, ತಮಿಳ್ ತಲೈವಾಸ್, ಬೆಂಗಳೂರು ಬುಲ್ಸ್, ಗುಜರಾತ್ ಜೈಂಟ್ಸ್‌, ದಬಾಂಗ್ ಡೆಲ್ಲಿ ಕೆ.ಸಿ., ತೆಲಗು ಟೈಟಾನ್ಸ್, ಪಾಟ್ನಾ ಪೈರೇಟ್ಸ್, ಹರ್ಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೇರಿ ಪಲ್ಟಾನ್ಸ್ ಹೀಗೆ ಎಲ್ಲಾ 12 ತಂಡಗಳು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದು, ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ.

Scroll to load tweet…

Pro Kabaddi Auction: ಪವನ್ ಶೆರಾವತ್ ಅವರನ್ನು ಕೈಬಿಟ್ಟ ಬೆಂಗಳೂರು ಬುಲ್ಸ್..!

2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಹರಾಜಿಗೂ ಮುನ್ನ ಎಲ್ಲಾ 12 ಫ್ರಾಂಚೈಸಿಗಳಿಗೂ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಅದರಂತೆ ಬಹುತೇಕ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ. ಆದರೆ ತೆಲುಗು ಟೈಟಾನ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಎಲ್ಲಾ ಆಟಗಾರರನ್ನು ರಿಲೀಸ್‌ ಮಾಡಿದ್ದು ಹೊಸದಾಗಿ ತಂಡ ಕಟ್ಟಲು ಸಜ್ಜಾಗಿವೆ

ಪಿಕೆಎಲ್ ಹರಾಜಿಗೂ ಮುನ್ನ 12 ತಂಡಗಳು ತಮಗೆ ಬೇಕಾದ ಎಲೈಟ್ ರೀಟೈನ್ ಪ್ಲೇಯರ್ಸ್‌ ವಿವರ ಇಲ್ಲಿದೆ ನೋಡಿ

ಬೆಂಗಾಲ್ ವಾರಿಯರ್ಸ್‌: ಮಣೀಂದರ್ ಸಿಂಗ್, ಮನೋಜ್ ಗೌಡ, ಆಕಾಶ್ ಪಿಕಲ್ಮುಂಡೆ

ಬೆಂಗಳೂರು ಬುಲ್ಸ್: ಮಹೇಂದರ್ ಸಿಂಗ್, ಮಯೂರ್ ಕದಂ, ಜಿಬಿ ಮೋರೆ

ದಬಾಂಗ್ ಡೆಲ್ಲಿ ಕೆ.ಸಿ: ವಿಜಯ್

ಗುಜರಾತ್ ಜೈಂಟ್ಸ್‌: ಸೋನು

ಹರ್ಯಾಣ ಸ್ಟೀಲರ್ಸ್‌: ಯಾವುದೇ ಎಲೈಟ್ ರೀಟೈನ್‌ ಪ್ಲೇಯರ್ಸ್ ಉಳಿಸಿಕೊಂಡಿಲ್ಲ

ಜೈಪುರ ಪಿಂಕ್ ಪ್ಯಾಂಥರ್ಸ್‌: ಅರ್ಜುನ್ ದೇಸ್ವಾಲ್, ಸಾಹುಲ್ ಕುಮಾರ್

ಪಾಟ್ನಾ ಪೈರೇಟ್ಸ್‌: ಮೊಹಮ್ಮದ್ರೇಜಾ ಚಿಯಾನೆಹ್, ಸಾಜಿನ್ ಸಿ, ನೀರಜ್ ಕುಮಾರ್, ಮೋನು

ಪುಣೇರಿ ಪಲ್ಟಾನ್‌: ಸೋಂಬಿರ್, ಅಭಿನೇಹ್ ನಂದರಾಜನ್

ತಮಿಳ್ ತಲೈವಾಸ್: ಅಜಿಂಕ್ಯ ಪವಾರ್

ತೆಲುಗು ಟೈಟಾನ್ಸ್: ಯಾವುದೇ ಎಲೈಟ್ ರೀಟೈನ್‌ ಪ್ಲೇಯರ್ಸ್ ಉಳಿಸಿಕೊಂಡಿಲ್ಲ

ಯು ಮುಂಬಾ: ರಿಂಕು

ಯುಪಿ ಯೋಧಾ: ನಿತೀಶ್ ಕುಮಾರ್ 

ಪ್ರಸಾರ ಎಲ್ಲಿ, ಯಾವಾಗ..?: ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಯು ಮುಂಬೈನಲ್ಲಿ ನಡೆಯಲಿದ್ದು, ಇಂದು ಸಂಜೆ 6.30ರಿಂದ ಹರಾಜು ಆರಂಭವಾಗಲಿದೆ. ಪ್ರೊ ಕಬಡ್ಡಿ ಆಟಗಾರರ ಹರಾಜು ಸ್ಟಾರ್ ಸ್ಪೋರ್ಟ್ಸ್‌ ಹಾಗೂ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.