ಪ್ರೊ ಕಬಡ್ಡಿ ಲೀಗ್ ಹರಾಜಿಗೆ ಕ್ಷಣಗಣನೆ ಆರಂಭಆಗಸ್ಟ್ 5 ಹಾಗೂ 6 ರಂದು ಮುಂಬೈನಲ್ಲಿ ನಡೆಯಲಿರುವ ಪಿಕೆಎಲ್ ಹರಾಜುಹರಾಜಿನಲ್ಲಿ ಪ್ರದೀಪ್ ನರ್ವಾಲ್, ಪವನ್ ಶೆರಾವತ್ ಭಾಗಿ

ಬೆಂಗಳೂರು(ಜು.29): 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿವೆ. ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಪಿಕೆಎಲ್ ಆಯೋಜಕರು ಗಡುವು ನೀಡಿತ್ತು. ಇದರ ಬೆನ್ನಲ್ಲೇ ಅಚ್ಚರಿಯ ಬೆಳವಣಿಕೆ ಎನ್ನುವಂತೆ ತಾರಾ ಆಟಗಾರರಾದ ಯುಪಿ ಯೋಧಾದ ಪ್ರದೀಪ್ ನರ್ವಾಲ್ ಹಾಗೂ ಬೆಂಗಳೂರು ಬುಲ್ಸ್‌ ತಂಡದ ಪವನ್ ಕುಮಾರ್ ಶೆರಾವತ್ ಅವರನ್ನು ಫ್ರಾಂಚೈಸಿಗಳು ತಂಡದಿಂದ ಕೈಬಿಟ್ಟಿವೆ. ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಭಾರತದ ಇಬ್ಬರು ತಾರಾ ಕಬಡ್ಡಿ ಆಟಗಾರರಾದ ಪವನ್ ಹಾಗೂ ಪ್ರದೀಪ್ ಅವರನ್ನು ತಂಡದಿಂದ ರಿಲೀಸ್ ಮಾಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಇದೀಗ ಪ್ರದೀಪ್ ನರ್ವಾಲ್ ಹಾಗೂ ಪವನ್ ಕುಮಾರ್ ಶೆರಾವತ್ ಪ್ರೊ ಕಬಡ್ಡಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. . ಬುಲ್ಸ್‌ ತಂಡ ಮಹೇಂದರ್‌ ಸಿಂಗ್‌, ಸೌರಭ್‌ ನಂದಲ್‌, ಜಿ.ಬಿ.ಮೋರೆ, ಮಯೂರ್‌ರನ್ನು ಉಳಿಸಿಕೊಂಡಿದೆ. ಇನ್ನುಳಿದಂತೆ ಅಭಿಷೇಕ್ ಸಿಂಗ್, ಫಜಲ್ ಅಟ್ರಾಚಲಿ, ಮಂಜೀತ್ ಚಿಲ್ಲರ್, ಸುರೇಂದರ್ ನಾಡಾ, ದೀಪಕ್ ನಿವಾಸ್ ಹೂಡಾ, ರಾಹುಲ್ ಚೌಧರಿ, ಸಿದ್ದಾರ್ಥ್ ದೇಸಾಯಿ ಮತ್ತು ರೋಹಿತ್ ಕುಮಾರ್ ಅವರಂತಹ ತಾರಾ ಆಟಗಾರರು ಸಹಾ ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಆಟಗಾರರನ್ನು ಫ್ರಾಂಚೈಸಿಗಳು ತಮ್ಮ ತಂಡದಿಂದ ರಿಲೀಸ್ ಮಾಡಿವೆ.

PKL Auction 2022: ಪ್ರೊ ಕಬಡ್ಡಿ ಲೀಗ್‌ ಹರಾಜಿಗೆ ಡೇಟ್‌ ಫಿಕ್ಸ್‌, ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್

9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹರಾಜಿಗೂ ಮುನ್ನ ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡ ಆಟಗಾರರು ಯಾರು?

ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯು ಮುಂಬರುವ ಆಗಸ್ಟ್ 05 ಹಾಗೂ 06ರಂದು ಮುಂಬೈನಲ್ಲಿ ನಡೆಯಲಿದೆ. ಪಿಕೆಎಲ್ ಹರಾಜಿಗೂ ಮುನ್ನ 12 ತಂಡಗಳು ತಮಗೆ ಬೇಕಾದ ಎಲೈಟ್ ರೀಟೈನ್ ಪ್ಲೇಯರ್ಸ್‌ ವಿವರ ಇಲ್ಲಿದೆ ನೋಡಿ

ಬೆಂಗಾಲ್ ವಾರಿಯರ್ಸ್‌: ಮಣೀಂದರ್ ಸಿಂಗ್, ಮನೋಜ್ ಗೌಡ, ಆಕಾಶ್ ಪಿಕಲ್ಮುಂಡೆ

ಬೆಂಗಳೂರು ಬುಲ್ಸ್: ಮಹೇಂದರ್ ಸಿಂಗ್, ಮಯೂರ್ ಕದಂ, ಜಿಬಿ ಮೋರೆ

ದಬಾಂಗ್ ಡೆಲ್ಲಿ ಕೆ.ಸಿ: ವಿಜಯ್

ಗುಜರಾತ್ ಜೈಂಟ್ಸ್‌: ಸೋನು

ಹರ್ಯಾಣ ಸ್ಟೀಲರ್ಸ್‌: ಯಾವುದೇ ಎಲೈಟ್ ರೀಟೈನ್‌ ಪ್ಲೇಯರ್ಸ್ ಉಳಿಸಿಕೊಂಡಿಲ್ಲ

ಜೈಪುರ ಪಿಂಕ್ ಪ್ಯಾಂಥರ್ಸ್‌: ಅರ್ಜುನ್ ದೇಸ್ವಾಲ್, ಸಾಹುಲ್ ಕುಮಾರ್

ಪಾಟ್ನಾ ಪೈರೇಟ್ಸ್‌: ಮೊಹಮ್ಮದ್ರೇಜಾ ಚಿಯಾನೆಹ್, ಸಾಜಿನ್ ಸಿ, ನೀರಜ್ ಕುಮಾರ್, ಮೋನು

ಪುಣೇರಿ ಪಲ್ಟಾನ್‌: ಸೋಂಬಿರ್, ಅಭಿನೇಹ್ ನಂದರಾಜನ್

ತಮಿಳ್ ತಲೈವಾಸ್: ಅಜಿಂಕ್ಯ ಪವಾರ್

ತೆಲುಗು ಟೈಟಾನ್ಸ್: ಯಾವುದೇ ಎಲೈಟ್ ರೀಟೈನ್‌ ಪ್ಲೇಯರ್ಸ್ ಉಳಿಸಿಕೊಂಡಿಲ್ಲ

ಯು ಮುಂಬಾ: ರಿಂಕು

ಯುಪಿ ಯೋಧಾ: ನಿತೀಶ್ ಕುಮಾರ್ 

ಹೊಸದಾಗಿ ತಂಡ ಕಟ್ಟಲು ರೆಡಿಯಾದ ಹರ್ಯಾಣ ಸ್ಟೀಲರ್ಸ್‌, ತೆಲುಗು ಟೈಟಾನ್ಸ್

ಈ ಬಾರಿ ಪ್ರೊ ಕಬಡ್ಡಿ ಲೀಗ್ ಹರಾಜಿಗೂ ಮುನ್ನ ಯಾವುದೇ ಆಟಗಾರರನ್ನು ರೀಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಆಗಸ್ಟ್ 5 ಹಾಗೂ 6ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆದಿದೆ. ಈ ಬಾರಿಯ ಹರಾಜಿನಲ್ಲಿ ಈ ಎರಡು ತಂಡಗಳು ಪ್ರದೀಪ್ ನರ್ವಾಲ್ ಇಲ್ಲವೇ ಪವನ್ ಶೆರಾವತ್‌ ಅವರಿಗೆ ಗಾಳ ಹಾಕಿದರೆ ಅಚ್ಚರಿ ಪಡುವಂತಿಲ್ಲ.