ಬೆಂಗಳೂರು(ಆ.15): ಆಲ್‌ ಇಂಡಿಯಾ ಹಾಕಿ ಟೂರ್ನಿಯಲ್ಲಿ ಹಾಕಿ ಕರ್ನಾಟಕ ಹಾಗೂ ಆರ್ಮಿ ಇಲೆವೆನ್‌ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ. ಬುಧವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಹಾಕಿ ಕರ್ನಾಟಕ ಮತ್ತು ಆರ್ಮಿ ಇಲೆವೆನ್‌ ತಂಡಗಳು 1-1ರಲ್ಲಿ ಡ್ರಾ ಸಾಧಿಸಿದವು. 

ಇದನ್ನೂ ಓದಿ: ಅಖಿಲ ಭಾರತ ಹಾಕಿ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಕರ್ನಾಟಕ ಪರ ಪೃಥ್ವಿ ರಾಜ್‌ (28ನೇ ನಿ.), ಆರ್ಮಿ ಇಲೆವೆನ್‌ ಪರ ಸಿರಾಜು ಅಲಿರಾ (52ನೇ ನಿ.) ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಆಲ್‌ ಇಂಡಿಯಾ ಕಸ್ಟಮ್ಸ್‌ ವಿರುದ್ಧ 7-2 ರಲ್ಲಿ ಕರ್ನಾಟಕದ ವಿ.ಆರ್‌. ರಘುನಾಥ್‌ ನೇತೃತ್ವದ ಇಂಡಿಯನ್‌ ಆಯಿಲ್‌ ವಿರುದ್ಧ ಗೆಲುವು ಸಾಧಿಸಿತು. ಗುಂಪು ಹಂತದ ಪಂದ್ಯಗಳು ಗುರುವಾರ ಮುಕ್ತಾಯಗೊಳ್ಳಲಿದ್ದು, ಸೆಮಿಫೈನಲ್‌ನಲ್ಲಿ ಕರ್ನಾಟಕ ಯಾವ ತಂಡವನ್ನು ಎದುರಿಸಲಿದೆ ಎನ್ನುವುದು ನಿರ್ಧಾರವಾಗಲಿದೆ.