ಬೆಂಗಳೂರು(ಆ.07): ಹಾಕಿ ಕರ್ನಾಟಕ ಆಯೋಜಿಸುತ್ತಿರುವ ಪ್ರತಿಷ್ಠಿತ ಡೋಲೋ 650 ಬೆಂಗಳೂರು ಕಪ್ ಹಾಕಿ ಟೂರ್ನಿಗೆ ಉದ್ಯಾನಗರಿ ಸಜ್ಜಾಗಿದೆ. ಆಗಸ್ಟ್ 10 ರಿಂದ 18ರ ವರೆಗೆ ನಡೆಯಲಿರುವ ಅಖಿಲ ಭಾರತ ಆಹ್ವಾನಿತ ಪುರುಷರ ಹಾಕಿ ಟೂರ್ನಿಯಲ್ಲಿ ದೇಶಿಯ ಮಟ್ಟದ 8 ಅಗ್ರ ತಂಡಗಳು ಕಾದಾಟ ನಡೆಸಲಿವೆ. 

ಇದನ್ನೂ ಓದಿ:  ಭಾರತ ಹಾಕಿ ತಂಡಕ್ಕೆ ಕನ್ನಡಿಗ ಸುನಿಲ್‌ ವಾಪಸ್‌

ಪ್ರತಿಷ್ಠಿತ ದೇಶಿ ಟೂರ್ನಿಯಲ್ಲಿ ಹಾಕಿ ಇಂಡಿಯಾ ಆಟಗಾರರಾದ, ಕರ್ನಾಟಕದ ಹೆಮ್ಮೆಯ ವಿ.ಆರ್.ರಘುನಾಥ್,  ನಿಕ್ಕಿನ್ ತಿಮ್ಮಯ್ಯ, ಎಸ್.ಕೆ.ಉತ್ತಪ್ಪ, ಅಡ್ರಿಯನ್ ಡಿಸೋಜ, ದೇವೇಂದ್ರ ವಾಲ್ಮೀಕಿ ಸೇರಿದಂತೆ ಸ್ಟಾರ್ ಆಟಗಾರರು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಾಂಪಿಯನ್ ತಂಡಕ್ಕೆ 4 ಲಕ್ಷ, ರನ್ನರ್ ಅಪ್ ತಂಡಕ್ಕೆ 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.

ಭಾರತದ ಯವ ಆಟಗಾರರಿಗೆ ಈ ಹಾಕಿ ಕೂಟ ಅತ್ಯುತ್ತಮ ಅವಕಾಶ  ನೀಡಲಿದೆ. ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು. ದೇಶದ ಅಗ್ರ ತಂಡಗಳ ಎದುರು ಆಡುವುದರಿಂದ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯಗಳನ್ನು ಪರೀಕ್ಷಿಸಿಕೊಳ್ಳಲು  ಸಹಾಯವಾಗುತ್ತೆ ಎಂದು ಹಿರಿಯ ಆಟಗಾರ, ಹಾಕಿ ಕರ್ನಾಟಕ ಉಪಾಧ್ಯಕ್ಷ ವಿ.ಆರ್ ರಘುನಾಥ್ ಹೇಳಿದರು.

ಇದನ್ನೂ ಓದಿ: FIH ಹಾಕಿ ಸೀರೀಸ್: ಭಾರತ ವನಿತೆಯರು ಚಾಂಪಿಯನ್

ಟೂರ್ನಿ ಹೇಗೆ?

ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. 8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. 

ಎ ಗುಂಪು
IOCL(ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್-ಮುಂಬೈ)
BPCL(ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್-ಮುಂಬೈ)
IN (ಇಂಡಿಯನ್ ನೇವಿ -ನವದೆಹಲಿ)
AIC(ಆಲ್ ಇಂಡಿಯನ್ ಕಸ್ಟಮ್-ಮುಂಬೈ)

ಬಿ ಗುಂಪು
ಆರ್ಮಿ ಇಲೆವೆನ್
ಏರ್ ಇಂಡಿಯಾ ಮುಂಬೈ
ಇಂಡಿಯನ್ ಏರ್‌ಫೋರ್ಸ್ -ನವದೆಹಲಿ
ಹಾಕಿ ಕರ್ನಾಟಕ

ವಿವಿಧ ತಂಡಗಳನ್ನು ಪ್ರತಿನಿಧಿಸುವ ಸ್ಟಾರ್ ಆಟಗಾರರು:
ವಿ.ಆರ್.ರಘುನಾಥ್, ಎಸ್.ಕೆ.ಉತ್ತಪ್ಪ,  ತಲ್ವಿಂದರ್ ಸಿಂಗ್, ಆಫಾನ್ ಯೂಸುಫ್, ಅಡ್ರಿಯನ್ ಡಿಸೋಜ,  ವಿಎಸ್ ವಿನಯ್,  ತುಷಾರ್ ಕಂಡೇಕರ್, ಡೇವಿಂದರ್ ವಾಲ್ಮಿಕಿ, ಹರ್ಜೀತ್ ಸಿಂಗ್, ನಿಕ್ಕಿನ್ ತಿಮ್ಮಯ್ಯ, ಆಕಾಶ್ ಚಿಟ್ಕೆ  ಸೇರಿದಂತೆ ಹಲವು ತಾರಾ ಆಟಗಾರರು ಬೆಂಗಳೂರು ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಟೂರ್ನಿ ವೇಳಾಪಟ್ಟಿ: