ಲಂಡನ್‌[ಏ.27]: ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಮನೋರಂಜನಾ ಡ್ರಗ್‌ ಸೇವಿಸಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯಿಂದ 21 ದಿನಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. 

ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದ ಹೇಲ್ಸ್‌, ಮುಂದಿನ ತಿಂಗಳು 2ನೇ ವಾರದ ವರೆಗೂ ಕ್ರಿಕೆಟ್‌ ಚಟುವಟಿಕೆಗಳಿಂದ ದೂರವಿರಲಿದ್ದು, ತಂಡದ ಸಿದ್ಧತೆಗೆ ಪೆಟ್ಟು ಬಿದ್ದಿದೆ. ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮನೋರಂಜನಾ ಡ್ರಗ್ಸ್‌ ನೀತಿಯಡಿ ಹೇಲ್ಸ್‌ 2ನೇ ಬಾರಿಗೆ ಸಿಕ್ಕಿ ಬೀಳುತ್ತಿದ್ದು, ದೊಡ್ಡ ಮೊತ್ತದ ದಂಡ ಸಹ ವಿಧಿಸುವ ಸಾಧ್ಯತೆ ಇದೆ.

2019ರ ವಿಶ್ವಕಪ್’ನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

30 ವರ್ಷದ ಹೇಲ್ಸ್ ಇಂಗ್ಲೆಂಡ್ ಪರ 70 ಪಂದ್ಯಗಳನ್ನಾಡಿ 6 ಶತಕ ಹಾಗೂ 14 ಅರ್ಧಶತಕ ಸಹಿತ 37.8ರ ಸರಾಸರಿಯಲ್ಲಿ 2419 ರನ್ ಬಾರಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.