ಇಂಡೋನೇಷ್ಯಾ ಓಪನ್ 2019: ಸಿಂಧು ಪ್ರಶಸ್ತಿ ಕನಸು ಭಗ್ನ!
ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಪಿವಿ ಸಿಂಧು, ಪ್ರಶಸ್ತಿ ಸುತ್ತಿನ ಹೋರಾಟಗಲ್ಲಿ ಮುಗ್ಗರಿಸಿದ್ದಾರೆ. ರೋಚಕ ಹೋರಾಟದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದ ಸಿಂಧು, ಅಂತಿಮ ಹಂತದಲ್ಲಿ ಸೋಲಿಗೆ ಶರಣಾದರು.
![Akane Yamaguchi defeated Pv sindhu and lift Indonesia Open 2019 title Akane Yamaguchi defeated Pv sindhu and lift Indonesia Open 2019 title](https://static-gi.asianetnews.com/images/01dga0zxmkfrvbf6revz3fncpm/sinh-jpg_363x203xt.jpg)
ಜಕಾರ್ತ(ಜು.21): ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರೆ ಪಿವಿ ಸಿಂಧು ಆಘಾತ ಅನುಭವಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸಿಂಧು, ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ.
ಇದನ್ನೂ ಓದಿ: ಪಿವಿ ಸಿಂಧೂ ಪಾತ್ರದಲ್ಲಿ ದೀಪಿಕಾ, ಮಿಥಾಲಿಯಾಗಿ ತಾಪ್ಸಿ ಪನ್ನು
ಫೈನಲ್ ಪಂದ್ಯದಲ್ಲಿ ಯಮಗುಚಿ 21-15, 21-16 ಅಂತರದಲ್ಲಿ ಸಿಂಧು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಪುಂದ್ಯದ ಆರಂಭಿಕ ಹಂತದಲ್ಲಿ 11-8 ಅಂತರದ ಮುನ್ನಡೆ ಸಾಧಿಸಿದ್ದ ಸಿಂಧು ಬಳಿಕ ಅಂತ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಯಮಗುಚಿ ಅದ್ಭುತ ಹೋರಾಟಕ್ಕೆ ತಲೆಬಾಗಿದರು.
ಇದನ್ನೂ ಓದಿ: ತೇಜಸ್ ಯುದ್ಧವಿಮಾನದಲ್ಲಿ ಹಾರಾಡಿದ ಬ್ಯಾಡ್ಮಿಂಟನ್ ತಾರೆ ಸಿಂಧು!
ಈ ವರ್ಷದ ಆರಂಭದಲ್ಲಿ ಇಂಡಿಯಾ ಓಪನ್ ಹಾಗೂ ಸಿಂಗಾಪೂರ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿ ನಿರಾಸೆ ಅನುಭವಿಸಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. ಈ ಮೂಲಕ 2019ರ ಮೊದಲ ಪ್ರಶಸ್ತಿ ಗೆಲ್ಲೋ ಅವಕಾಶ ಕೈತಪ್ಪಿದೆ.