ಭಾರತ ‘ಎ’ ತಂಡ ಸೋಮವಾರದಿಂದ ವೋರ್ಚೆಸ್ಟರ್‌ನಲ್ಲಿ ನಡೆಯಲಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಲಂಡನ್[ಜು.16]: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಅಗತ್ಯ ಅಭ್ಯಾಸಕ್ಕಾಗಿ ಭಾರತ ಟೆಸ್ಟ್ ತಂಡದ ಆಟಗಾರರಾದ ಮುರಳಿ ವಿಜಯ್ ಹಾಗೂ ಅಜಿಂಕ್ಯ ರಹಾನೆ, ಭಾರತ ‘ಎ’ ತಂಡದ ಪರ ಆಡಲಿದ್ದಾರೆ. 

ಭಾರತ ‘ಎ’ ತಂಡ ಸೋಮವಾರದಿಂದ ವೋರ್ಚೆಸ್ಟರ್‌ನಲ್ಲಿ ನಡೆಯಲಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಆಫ್ಘಾನಿಸ್ತಾನ ವಿರುದ್ಧ ಕಳೆದ ತಿಂಗಳು ನಡೆದ ಏಕೈಕ ಟೆಸ್ಟ್ ಪಂದ್ಯದ ಬಳಿಕ, ವಿಜಯ್ ಹಾಗೂ ರಹಾನೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.

ಇಂಗ್ಲೆಂಡ್ ಲಯನ್ಸ್ ಪರ ಅಲಿಸ್ಟರ್ ಕುಕ್ ಆಡಲಿದ್ದಾರೆ. ಈ ಪಂದ್ಯದ ವೇಳೆ ಇಲ್ಲವೇ ಪಂದ್ಯ ಮುಗಿದ ಬಳಿಕ, 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟಗೊಳ್ಳಲಿದೆ.