Asianet Suvarna News Asianet Suvarna News

ಟೀಂ ಇಂಡಿಯಾ 107ಕ್ಕೆ ಆಲೌಟ್ ಆದ್ರೂ ಗೆಲುವು ನಮ್ಮದೇ ?

107 ರನ್‌ಗೆ ಆಲೌಟ್. ಹಾಗಂತ ಪಂದ್ಯ ಇಲ್ಲಿಗೆ ಮುಗಿದು ಹೋಗಿಲ್ಲ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ, ತಂಡದ ಆತ್ಮವಿಶ್ವಾಸವೇನು ಕಡಿಮೆಯಾಗಿಲ್ಲ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುತ್ತಾ? ಇಲ್ಲಿದೆ ವಿವರ.

Ajinkya rahane confident that India will win lords test
Author
Bengaluru, First Published Aug 11, 2018, 3:49 PM IST

ಲಾರ್ಡ್ಸ್(ಆ.11): ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 107ರನ್‌ಗೆ  ಆಲೌಟ್ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 35.2 ಓವರ್ ಬ್ಯಾಟಿಂಗ್ ಮಾಡಿ ಅಲ್ಪಮೊತ್ತಕ್ಕೆ ಆಲೌಟ್ ಆದರೂ, ಟೀಂ ಇಂಡಿಯಾದ ಆತ್ಮವಿಶ್ವಾಸಕ್ಕೇನು ಕೊರತೆಯಾಗಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಮ್‌ಬ್ಯಾಕ್ ಮಾಡೋ ಅವಕಾಶ ಭಾರತಕ್ಕಿದೆ. ಈ ಮೂಲಕ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಂ ಇಂಡಿಯಾ ಹವಣಿಸಲಿದೆ ಎಂದು ಉಪನಾಯಕ ಅಜಿಂಕ್ಯ ರಹಾನೆ ಐಸಿಸಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪಂದ್ಯ ಇಲ್ಲಿಗೆ ಮುಗಿದಿಲ್ಲ. ಆತ್ಮವಿಶ್ವಾಸದಿಂದ ಆಡಿದರೆ ಖಂಡಿತ ಲಾರ್ಡ್ಸ ಪಂದ್ಯ ಗೆಲ್ಲಲು ಸಾಧ್ಯವಿದೆ. ಉಳಿದಿರೋ ಪ್ರತಿ ಸೆಶನ್‌ಗಳೂ ಟೀಂ ಇಂಡಿಯಾಗೆ ಪ್ರಮುಖವಾಗಿದೆ ಎಂದು ರಹಾನೆ ಹೇಳಿದ್ದಾರೆ.

ಟೀಂ ಇಂಡಿಯಾವನ್ನ ಆಲೌಟ್ ಮಾಡಿರುವ ಇಂಗ್ಲೆಂಡ್ ತೃತೀಯ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಮಳೆರಾಯ ಮೇಲುಗೈ ಸಾಧಿಸಿದ್ರೆ, ದ್ವಿತೀಯ ದಿನ ಇಂಗ್ಲೆಂಡ್ ಪಾಲಾಗಿತ್ತು. ಇದೀಗ ತೃತೀಯ ದಿನದ ಹೋರಾಟ ಫಲಿತಾಂಶ ನಿರ್ಧರಿಸಲಿದೆ.
 

Follow Us:
Download App:
  • android
  • ios