ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಆಟಗಾರರು ಶುಭ ಕೋರಿದ್ದು ಹೀಗೆ...
ಬೆಂಗಳೂರು(ಸೆ.03): ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಇಂದು 27ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಸೊಗಸಾದ ಇನ್'ಸ್ವಿಂಗ್ ಹಾಗೂ ಔಟ್'ಸ್ವಿಂಗ್'ಗಳ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳನ್ನು ತಬ್ಬಿಬ್ಬು ಮಾಡುವ ಚಾಕಚಕ್ಯತೆ ಶಮಿಗಿದೆ.
ಉತ್ತರಪ್ರದೇಶ ಮೂಲದ ಮೊಹಮ್ಮದ್ ಶಮಿ, 2010ರಲ್ಲಿ ಅಸ್ಸಾಂ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದರು. ಇದಾದ ಮರು ವರ್ಷದಲ್ಲೇ ಕೋಲ್ಕತಾ ನೈಟ್'ರೈಡರ್ಸ್ ತಂಡವನ್ನು ಕೂಡಿಕೊಂಡ ಶಮಿ, ಲೈನ್ ಹಾಗೂ ಲೆಂಗ್ತ್ ಸುಧಾರಿಸಿಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಟೀಂ ಇಂಡಿಯಾ ಕೂಡಿಕೊಂಡ ಬಳಿಕ ಶಮಿ ಹಿಂತಿರುಗಿ ನೋಡಿದ್ದೇ ಇಲ್ಲ. ಇದೀಗ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಅವಿಭಾಜ್ಯವಾಗಿ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಆಟಗಾರರು ಶುಭ ಕೋರಿದ್ದು ಹೀಗೆ...
