ಚೊಚ್ಚಲ ಗ್ರ್ಯಾಂಡ್‌'ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿರುವ ಬೋಪಣ್ಣ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿವೆ.

ನವದೆಹಲಿ(ಜೂ.10): ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ ಸ್ಲಾಮ್‌'ನ ಮಿಶ್ರ ಡಬಲ್ಸ್‌'ನ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ರೋಹನ್‌ ಬೋಪಣ್ಣ ಅವರ ಹೆಸರನ್ನು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ), ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 
ರೋಹನ್‌ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೆಲಾ ದಬ್ರೌಸ್ಕಿ ಜೋಡಿ ಜರ್ಮನಿಯ ಆ್ಯನಾ ಲೆನಾ ಗ್ರೊನೆಫೆಲ್ಡ್‌ ಹಾಗೂ ಕೊಲೊಂಬಿಯಾದ ರಾಬರ್ಟ್‌ ಫರ್ಹಾ ಜೋಡಿಯನ್ನು ಮಣಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೊಚ್ಚಲ ಗ್ರ್ಯಾಂಡ್‌'ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿರುವ ಬೋಪಣ್ಣ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿವೆ.

‘ಅರ್ಜುನ ಪ್ರಶಸ್ತಿಗೆ ಬೋಪಣ್ಣ ಹೆಸರನ್ನು ಶಿಫಾರಸು ಮಾಡಿದ್ದೇವೆ. ಈ ಮೊದಲು ಸಹ ಅವರ ಹೆಸರನ್ನು ಶಿಫಾರಸು ಮಾಡಿದ್ದೆವು, ಆದರೆ ಪ್ರಶಸ್ತಿ ಸಿಕ್ಕಿರಲಿಲ್ಲ' ಎಂದು ಎಐಟಿಎ ಕಾರ್ಯದರ್ಶಿ ಚಟರ್ಜಿ ತಿಳಿಸಿದ್ದಾರೆ.