ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸುತ್ತಿದ್ದಂತೆ, ಬದಲಾವಣೆಗೆ ಆಗ್ರಹಗಳು ಕೇಳಿಬರುತ್ತಿದೆ. ಇದೀಗ ಕೋಚ್ ರವಿ ಶಾಸ್ತ್ರಿ ಬದಲು, ಮಾಜಿ ಕೋಚ್ ಅನಿಲ್ ಕುಂಬ್ಳೆ ನೇಮಿಸು ಟ್ವಿಟರಿಗರು ಆಗ್ರಹಿಸಿದ್ದಾರೆ. ಇಲ್ಲಿದೆ ಟ್ವಿಟರಿಗರ ಅದ್ಬುತ ಪ್ರತಿಕ್ರಿಯೆ.
ಲಾರ್ಡ್ಸ್(ಆ.13): ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರವಲ್ಲ, ಕೋಚ್ ರವಿ ಶಾಸ್ತ್ರಿ ಕೂಡ ಟ್ವಿಟರಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಇದೀಗ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರವಿ ಶಾಸ್ತ್ರಿ ಬದಲು, ಮಾಜಿ ಯಶಸ್ವಿ ಕೋಚ್ ,ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆ ಮಾಡಲು ಆಗ್ರಹ ಕೇಳಿಬಂದಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 31 ರನ್ ಸೋಲು ಅನುಭವಿಸಿದ ಟೀಂ ಇಂಡಿಯಾ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 159 ರನ್ ಸೋಲು ಅನುಭವಿಸಿತ್ತು. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಟ್ವಿಟರಿಗರು ಟೀಕಿಸಿದ್ದಾರೆ.
ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡುವುದಾದರೆ, ಕೋಚ್‌ನಿಂದಲೇ ಆರಂಭವಾಗಲಿ ಎಂದಿದ್ದಾರೆ. ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.
