ದುಬೈ[ಫೆ.05]: ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ವೆಸ್ಟ್‌ ಇಂಡೀಸ್‌ ನಾಯಕ ಜೇಸನ್‌ ಹೋಲ್ಡರ್‌ರನ್ನು ಐಸಿಸಿ 3ನೇ ಹಾಗೂ ಅಂತಿಮ ಪಂದ್ಯಕ್ಕೆ ನಿಷೇಧಗೊಳಿಸಿದೆ. 

ನಿರ್ದಿಷ್ಟ ಸಮಯದಲ್ಲಿ ವಿಂಡೀಸ್‌ ಓವರ್‌ ಪೂರ್ಣಗೊಳ್ಳಲು ವಿಫಲಗೊಂಡಿದ್ದು, 2 ಓವರ್‌ ಹಿಂದಿತ್ತು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೂರೇ ದಿನದಲ್ಲಿ ಪಂದ್ಯ ಮುಕ್ತಾಯಗೊಂಡರೂ, ನಿಧಾನಗತಿ ಬೌಲಿಂಗ್‌ ಕಾರಣ ನೀಡಿ ನಿಷೇಧ ಶಿಕ್ಷೆ ವಿಧಿಸಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ದಿಗ್ಗಜ ಸ್ಪಿನ್ನರ್‌ ಶೇನ್‌ ವಾರ್ನ್‌, ಐಸಿಸಿ ನಿರ್ಧಾರವನ್ನು ಹಾಸ್ಯಸ್ಪದ ಎಂದಿದ್ದಾರೆ.

ಸರಣಿ ಸೋಲಿನ ಬೆನ್ನಲ್ಲೇ ಕಿವೀಸ್’ಗೆ ಮತ್ತೊಂದು ಶಾಕ್..!

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಾಗಲೇ ಜೇಸನ್ ಹೋಲ್ಡರ್ ನಾಯಕತ್ವದ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಸರಣಿ ಜಯಿಸಿದೆ. ಇದೀಗ ಹೋಲ್ಡರ್ ಅನುಪಸ್ಥಿತಿಯಲ್ಲಿ ವಿಂಡೀಸ್ ತಂಡವನ್ನು ಕ್ರೇಗ್ ಬ್ರಾಥ್’ವೈಟ್ ಮುನ್ನಡೆಲಿದ್ದಾರೆ. 2009ರ ಬಳಿಕ ಇದೇ ಮೊದಲ ಬಾರಿಗೆ ವಿಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ. 

ಇಂಡೊ-ಕಿವೀಸ್ ಸರಣಿಯಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

ಬಾರ್ಬಡೋಸ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೋಲ್ಡರ್ ಅಜೇಯ 202 ರನ್ ಹಾಗೂ ಒಂದು ವಿಕೆಟ್ ಕಬಳಿಸಿದ್ದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ 381 ರನ್’ಗಳ ಭರ್ಜರಿ ಜಯ ಸಾಧಿಸಲು ನೆರವಾಗಿದ್ದರು. ಇನ್ನು ಆ್ಯಂಟಿಗುವಾ ಟೆಸ್ಟ್’ನಲ್ಲೂ ಹೋಲ್ಡರ್ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.