ಕಾಬೂಲ್[ಏ.22]: ಇಂಗ್ಲೆಂಡ್’ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಗೆ ಆಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಗುಲ್ಬದ್ದೀನ್ ನೈಬ್ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಮೊದಲು ಆಫ್ಘಾನಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯು 23 ಆಟಗಾರರನ್ನೊಳಗೊಂಡ ಸಂಭಾವ್ಯ ತಂಡವನ್ನು ಪ್ರಕಟಿಸಿತ್ತು. ಆ ಬಳಿಕ ಟ್ರೈನಿಂಗ್’ನ ಶಿಬಿರದಲ್ಲಿ ಆಟಗಾರರು ಫಿಟ್ನೆಸ್ ಸಾಬೀತು ಪಡಿಸಿದ ಬಳಿಕ ಅಂತಿಮ 15 ಆಟಗಾರರ ತಂಡವನ್ನು ಪ್ರಕಟಿಸಲಾಯಿತು. ಯುವ ಪ್ರತಿಭಾನ್ವಿತ ಆಟಗಾರನ್ನೊಳಗೊಂಡ ತಂಡ ಆಸ್ಟ್ರೇಲಿಯಾ ವಿರುದ್ಧ ಜೂ.01ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಸ್ಫೋಟಕ ಬ್ಯಾಟ್ಸ್’ಮನ್ ಮೊಹಮ್ಮದ್ ಶೆಹಜಾದ್, ಹರ್ಜತುಲ್ ಝಜೈ, ಆಸ್ಗರ್ ಅಫ್ಘನ್, ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಆಲ್ರೌಂಡರ್ ಮೊಹಮ್ಮದ್ ನಭಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಇಕ್ರಾಂ ಅಲಿಕಿಲ್, ಕರೀಂ ಜನ್ನತ್ ಹಾಗೂ ಸೈಯ್ಯದ್ ಶಿರ್ಜಾದ್ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.

ಆಫ್ಘಾನಿಸ್ತಾನ ತಂಡ ಹೀಗಿದೆ...

ಗುಲ್ಬದ್ದೀನ್ ನೈಬ್[ನಾಯಕ], ಮೊಹಮ್ಮದ್ ಶೆಹಜಾದ್[ವಿಕೆಟ್ ಕೀಪರ್], ನೂರ್ ಅಲಿ ಜದ್ರಾನ್, ಹರ್ಜತುಲ್ಲಾ ಝಜೈ, ರೆಹಮತ್ ಶಾ, ಆಸ್ಗರ್ ಅಫ್ಘನ್, ಹಸ್ಮತುಲ್ಲಾ ಶಾಹಿದಿ, ನಜೀಬುಲ್ಲಾ ಜದ್ರಾನ್, ಸಮೀವುಲ್ಲಾ ಶಿನ್ವಾರಿ, ಮೊಹಮ್ಮದ್ ನಭಿ, ರಶೀದ್ ಖಾನ್, ದೌಲತ್ ಜದ್ರಾನ್, ಆಫ್ತಾಬ್ ಆಲಂ, ಹಮೀದ್ ಹಸನ್ ಮತ್ತು ಮುಜೀಬ್ ಉರ್ ರೆಹಮಾನ್