ನವದೆಹಲಿ[ಸೆ.12]: ಐಪಿಎಲ್ ಮಾದರಿಯ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟಿ20(ಎಪಿಎಲ್)ಗೆ ತಾರಾ ಮೆರುಗು ಸಿಕ್ಕಿದೆ. ಲೀಗ್‌ನಲ್ಲಿ ವಿಶ್ವ ಶ್ರೇಷ್ಠ ಆಟಗಾರರಾದ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ, ಬ್ರೆಂಡನ್ ಮೆಕ್ಕಲಂ, ರಶೀದ್ ಖಾನ್, ಆ್ಯಂಡ್ರೆ ರಸೆಲ್, ಕಾಲಿನ್ ಮನ್ರೊ, ಮೊಹಮದ್ ಹಫೀಜ್ ಸೇರಿ ಇನ್ನೂ ಅನೇಕರು ಪಾಲ್ಗೊಳ್ಳಲಿದ್ದಾರೆ. 

ಪಂದ್ಯಾವಳಿ ಅ.5ರಿಂದ ಅ.23ರ ವರೆಗೂ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಒಟ್ಟು 5 ತಂಡಗಳು ಕಣಕ್ಕಿಳಿಯಲಿವೆ. ಪಾಕ್ತಿಯ ತಂಡಕ್ಕೆ ಅಫ್ರಿದಿ ಐಕಾನ್ ಆಟಗಾರರಾಗಿದ್ದರೆ, ಕಾಬೂಲ್ ತಂಡಕ್ಕೆ ರಶೀದ್ ಖಾನ್ ಸ್ಟಾರ್ ಐಕಾನ್ ಆಟಗಾರರಾಗಿ ನೇಮಕಗೊಂಡಿದ್ದಾರೆ. ಇನ್ನು ಬಾಲ್ಕ್ ತಂಡದ ಐಕಾನ್ ಆಟಗಾರರಾಗಿ ಕ್ರಿಸ್ ಗೇಲ್ ಆಯ್ಕೆಯಾಗಿದ್ದರೆ, ನಾನ್’ಘರ್’ಹರ್ ತಂಡದಲ್ಲಿ ಆ್ಯಂಡ್ರೆ ರಸೆಲ್ ಐಕಾನ್ ಆಟಗಾರ ಎನಿಸಿದ್ದಾರೆ. ಇನ್ನು ಕಂದಹಾರ್ ತಂಡಕ್ಕೆ ಬ್ರೆಂಡನ್ ಮೆಕ್ಲಮ್ ಐಕಾನ್ ಆಟಗಾರ ಎನಿಸಿಕೊಂಡಿದ್ದಾರೆ.

ಆಫ್ಘಾನಿಸ್ತಾನದ ಯುವ ಪ್ರತಿಭೆಗಳ ಜತೆ ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ದ.ಆಫ್ರಿಕಾ, ವೆಸ್ಟ್‌ಇಂಡೀಸ್‌ನ ಕ್ರಿಕೆಟಿಗರು ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.