ಶಹಜಾದ್ 2010ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದು, 58 ಪಂದ್ಯಗಳಲ್ಲಿ 1901 ರನ್ ಕಲೆ ಹಾಕಿದ್ದಾರೆ.

ದುಬೈ(ಡಿ.08): ಉದ್ದೀಪನಾ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿದ್ದ ಆಫ್ಘಾನಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ಶಹಜಾದ್‌'ರನ್ನು 12 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಶಹಜಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸಿ ಗುರುವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಈ ವರ್ಷದ ಆರಂಭದಲ್ಲಿ ಶಹಜಾದ್ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಮೂತ್ರ ಪರೀಕ್ಷೆಯಲ್ಲಿ ಅವರ ಮದ್ದು ಸೇವಿಸಿರುವುದು ಖಚಿತವಾಗಿದ್ದರಿಂದ ಒಂದು ವರ್ಷ ಕ್ರಿಕೆಟ್ ಚಟುವಟಿಕೆಯಿಂದ ದೂರ ಇರಿಸಲಾಗಿತ್ತು. ಅವರ ಅಮಾನತು ಅವಧಿ 2018ರ ಜ. 17ಕ್ಕೆ ಪೂರ್ಣಗೊಳ್ಳಲಿದೆ.

ಶಹಜಾದ್ 2010ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದು, 58 ಪಂದ್ಯಗಳಲ್ಲಿ 1901 ರನ್ ಕಲೆ ಹಾಕಿದ್ದಾರೆ.